

ಕೆ.ಎಂ.ದೊಡ್ಡಿ: ಸಮೀಪದ ತೊರೆಬೊಮ್ಮಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಾಸಕ ಕದಲೂರು ಉದಯ್ ಬೆಂಬಲಿಗರಾದ ಹೊನ್ನಾಯಕನಹಳ್ಳಿ ಗ್ರಾಮದ ಸುಲೋಚನಾ ಅಂದಾನಿಗೌಡ, ಉಪಾಧ್ಯಕ್ಷರಾಗಿ ಟಿ.ನಂಜುಂಡೇಗೌಡ ಅವಿರೋಧವಾಗಿ ಆಯ್ಕೆಯಾದರು.
ಮಂಗಳವಾರ ಕಚೇರಿ ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಲೋಚನಾ ಅಂದಾನಿಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಟಿ.ನಂಜುಂಡೇಗೌಡ ಅವರನ್ನು ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಿ.ಎ.ಸುಧಾಕರ್ ಅವಿರೋಧ ಆಯ್ಕೆ ಘೋಷಿಸಿದರು.
ಸುಲೋಚನಾ ಅಂದಾನಿಗೌಡ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಶಾಸಕ ಕದಲೂರು ಉದಯ್ ಅವರು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲು ಸಹಕರಿಸಿದ್ದು ಅವರ ಮಾರ್ಗದರ್ಶನದಲ್ಲಿ ಸೊಸೈಟಿ ಅಭಿವೃದ್ಧಿಗೆ ದುಡಿಯುತ್ತೇನೆ. ಸಹಕಾರ ಸಂಘದ ವ್ಯಾಪ್ತಿಗೆ ಬರುವ ತೊರೆಬೊಮ್ಮನಹಳ್ಳಿ ಸೇರಿದಂತೆ ಹೊನ್ನಾಯಕನಹಳ್ಳಿ, ಸುಣ್ಣದದೊಡ್ಡಿ, ಪುಟ್ಟೇಗೌಡನದೊಡ್ಡಿ ಗ್ರಾಮಗಳ ರೈತರಿಗೆ ಸರಕಾರದದಿಂದ ಸಿಗುವ ಸಬ್ಸಿಡಿಗಳು ನೆರವಾಗಿ ತಲುಪುವಂತೆ ಮಾಡಲು ಕ್ರಮ ವಹಿಸುತ್ತೇನೆ. ಸಹಕಾರ ಸಂಘಗಳು ರೈತರಿಗೆ ವರದಾನವಾಗಬೇಕು. ಆ ನಿಟ್ಟಿನಲ್ಲಿ ಸಂಘದ ಅಭಿವೃದ್ಧಿಗೆ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಸದಸ್ಯರ ಜತೆಗೂಡಿ ಮಾದರಿ ಸಂಘ ಮಾಡಲು ಪಣ ತೋಡುತ್ತೇನೆ ಎಂದು ಭರವಸೆ ನೀಡಿದರು.
ಮುಖಂಡರಾದ ತೊರೆಬೊಮ್ಮನಹಳ್ಳಿ ವೆಂಕಟೇಶ್, ಪ್ರಜಾಪ್ರಿಯಾ ವೆಂಕಟೇಶ್, ರಾಜೇಂದ್ರ, ಅಭಿಷೇಕ್‌ಗೌಡ, ಶ್ರೀಕಂಟೇಗೌಡ, ಸುಣ್ಣದೊಡ್ಡಿ ಮಹೇಶ್, ಮಧು, ಸಿದ್ದೇಗೌಡ , ನಿರ್ದೇಶಕರಾದ ಲಕ್ಷ್ಮಮ್ಮ, ನಾಗೇಶ್, ಪುಟ್ಟರಾಮು, ಶಿವಮಾಧು, ಎಚ್.ಕೆ.ಕೃಷ್ಣ, ಚಿಕ್ಕದೇವಯ್ಯ, ಸಿದ್ದಲಿಂಗರಾಜೇ ಅರಸ್, ಜಯಲಿಂಗ, ಸ್ವಾಮಿ ಮತ್ತಿತರಿದ್ದರು.