ಸಂಘ ಸಂಸ್ಥೆ ಪ್ರತಿನಿಧಿಗಳ ಸಮಾಲೋಚನಾ ಸಭೆ

kannada
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕರ್ಣಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಆಶ್ರಯದಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದೊಂದಿಗೆ ನ.10ರಂದು ನಡೆಯಲಿರುವ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು.

ಕಾಸರಗೋಡು ನಗರಸಭಾ ಸದಸ್ಯೆ ಶಾರದಾ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಲಾ, ಸಾಂಸ್ಕೃತಿಕ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಯು.ಆರ್ ಶೆಟ್ಟಿ, ನಿರಂಜನ ಕೊರಕ್ಕೋಡು, ಕೆ.ಗುರುಪ್ರಸಾದ್ ಕೋಟೆಕಣಿ, ಲವ ಮೀಪುಗುರಿ, ದಿವಾಕರ ಅಶೋಕ್ ನಗರ, ಕುಶಲಕುಮಾರ್ ಪಾರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು, ಪ್ರಧಾನ ಸಂಚಾಲಕರಾಗಿ ಕೆ .ಜಗದೀಶ ಕೂಡ್ಲು, ಕಾರ್ಯಕ್ರಮ ಸಂಯೋಜನ ಸಮಿತಿ ಅಧ್ಯಕ್ಷರಾಗಿ ಗುರುಪ್ರಸಾದ್ ಕೋಟೆ ಕಣಿ, ಗೌರವ ಸಲಹೆಗಾರರಾಗಿ ಕೆ.ನಿರಂಜನ ಕೊರಕ್ಕೋಡು, ಸಂಚಾಲಕರಾಗಿ ಯು.ಆರ್.ಶೆಟ್ಟಿ ಮಂಗಳೂರು, ಪ್ರದೀಪ್ ಬೇಕಲ್, ದಿವಾಕರ ಅಶೋಕ್ ನಗರ್, ಶ್ರೀಕಾಂತ್ ಕಾಸರಗೋಡು, ಕುಶಲಕುಮಾರ್ ಕೆ., ಅನಿಲ್‌ರಾಜ್ ನಾಗರಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.

ನ.10ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿರುವ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಪ್ರಚಾರ ಪತ್ರವನ್ನು ಕಾಸರಗೋಡು ನಗರಸಭಾ ಸದಸ್ಯೆ ಶಾರದಾ ಅವರು ಮಕ್ಕಳಿಗೆ ನೀಡಿ ಬಿಡುಗಡೆಗೊಳಿಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು. ಅನಿಲ್ ರಾಜ್ ನಾಗರಕಟ್ಟೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net