ಶಾಶ್ವತ ಪರಿಹಾರಕ್ಕೆ ಕಾನೂನು ಚೌಕಟ್ಟಿನಲ್ಲಿ ಕ್ರಮ : ಶಾಸಕ ಅಶೋಕ್ ರೈ ಭರವಸೆ

New Project (16)
Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಕಾಡಾನೆ ಹಾವಳಿ ತಡೆಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಕಾನೂನು ಚೌಕಟ್ಟಿನೊಳಗೆ ಕ್ರಮಕೈಗೊಳ್ಳುವ ಕೆಲಸ ಮಾಡುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕಾಡಾನೆ ಹಾವಳಿ ಹಿನ್ನೆಲೆಯಲ್ಲಿ ಕೊಳ್ತಿಗೆ ಗ್ರಾಪಂ ಸಭಾಭವನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಶನಿವಾರ ಗ್ರಾಮಸ್ಥರ ಹಾಗೂ ಅಧಿಕಾರಿಗಳ ಸಭೆ ನಡೆಸಿದರು.

ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಮಾತನಾಡಿ, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರವಾಗಬೇಕು ಎಂದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿಗೆ ಮೆಡಿಕಲ್ ಕಾಲೇಜಿನಂತಹ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಶಾಸಕರು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ಮೂಲಕ ಈ ಭಾಗದ ನಾಲ್ಕೈದು ಗ್ರಾಮಗಳ ಜನತೆಯನ್ನು ಭಯಮುಕ್ತರನ್ನಾಗಿಸುವ ನಂಬಿಕೆ ಇದೆ ಎಂದರು.

ಗ್ರಾಮಸ್ಥರಾದ ಕೆ.ಎಸ್.ವೆಂಕಟ್ರಮಣ, ಪಂಚಾಯಿತಿ ಸದಸ್ಯ ಪವನ್ ಡಿ.ಜಿ., ದೇರ್ತಗೆ ಸತ್ಯನಾರಾಯಣ ಭಟ್, ಲೋಕೇಶ್ ಪೆರ್ಲಂಪಾಡಿ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು.

ಪುತ್ತೂರು ಉಪವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಕೊಳ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಅಮಳ ರಾಮಚಂದ್ರ, ಬಾಯಂಬಾಡಿ ಷಣ್ಮುಖದೇವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆವ್ಮಾರ ಗಂಗಾಧರ ಗೌಡ, ಕೊಳ್ತಿಗೆ ಹಾಲು ಉತ್ಪಾದಕರ ಸಂ ಅಧ್ಯಕ್ಷ ವಿಶ್ವನಾಥ ರೈ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ.ಉಪಸ್ಥಿತರಿದ್ದರು.

ಈಗಾಗಲೇ ಕಾಡಾನೆಯಿಂದ ಆಗಿರುವ ಕಷಿ ನಾಶ ನಷ್ಟ ಹಾಗೂ ಒಂದು ಸಾವಿನ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಕಾಡಾನೆಯನ್ನು ಹಿಡಿದು ಬೇರೆ ಕಡೆಗೆ ಸ್ಥಳಾಂತರ ಮಾಡುವುದೇ ಸೂಕ್ತ ಎಂದು ವರದಿ ಸಲ್ಲಿಸಿದ್ದೇವೆ. ಇಲಾಖೆ ವತಿಯಿಂದ ಹಗಲುರಾತ್ರಿ ಗಸ್ತು ವ್ಯವಸ್ಥೆಯೊಂದಿಗೆ ಗ್ರೂಪ್ ರಚಿಸಿಕೊಂಡು ಮಾಹಿತಿ ಹಂಚುವ ಕೆಲಸವನ್ನೂ ಮಾಡಲಾಗುತ್ತಿದೆ. ಸುಬ್ಬಯ್ಯ ನಾಯ್ಕ, ಪುತ್ತೂರು ಉಪವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net