ಕಟ್ಟಡ ಕಾರ್ಮಿಕರ ಬದುಕಿಗೆ ಭದ್ರತೆ ಅಗತ್ಯ

20hos1p kattada karmika
ಹೊಸನಗರ ತಾಲೂಕಿನ ಮೂಡುಗೊಪ್ಪದಲ್ಲಿ ಹಿರಿಯ ಕಾರ್ಮಿಕರಾದ ವೆಂಕಪ್ಪ ಪೂಜಾರಿ, ಸೂರಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಯು.ಸಂಗೀತಾ, ಸುಮನಾ ಭಾಸ್ಕರ್, ರಾಮಚಂದ್ರಪ್ಪ, ರವೀಂದ್ರ ಇತರರಿದ್ದರು.
Published on

ಹೊಸನಗರ: ಗ್ರಾಮೀಣ ಪ್ರದೇಶದಲ್ಲಿ ಸವಾಲಿನ ಬದುಕು ಎದುರಿಸುತ್ತಿರುವ ಕಟ್ಟಡ ಕಾರ್ಮಿಕ ಕುಟುಂಬಗಳ ಬದುಕಿಗೆ ಭದ್ರತೆ ನೀಡುವುದು ಅಗತ್ಯವಾಗಿದೆ ಎಂದು ಮೂಡುಗೊಪ್ಪ ಗ್ರಾಪಂ ಅಧ್ಯಕ್ಷೆ ಯು.ಸಂಗೀತಾ ಹೇಳಿದದರು.

ನಗರ ಪಂಚಮುಖಿ ಆಂಜನೇಯ ದೇಗುಲದ ಸಭಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಮೂಡುಗೊಪ್ಪ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುರು ಪೂಜಾರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ ಅವರಿಗೆ ಸರ್ಕಾರದ ಪಿಂಚಣಿ, ವಿಮೆ, ವಿದ್ಯಾರ್ಥಿ ವೇತನ, ಪರಿಹಾರ ಈ ಯಾವುದರ ಬಗ್ಗೆ ಮಾಹಿತಿ ಇಲ್ಲ. ಅವರಿಗೆ ಅಗತ್ಯ ಮಾಹಿತಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಎಲ್ಲಾ ಕಾರ್ಮಿಕರ ಹೆಸರನ್ನು ನೋಂದಣಿ ಮಾಡಿಸುವ ಸಲುವಾಗಿ ನೂತನ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಹಿರಿಯರಾದ ವೆಂಕಪ್ಪ ಪೂಜಾರಿ, ಸೂರಪ್ಪ ಪೂಜಾರಿ ಅವರನ್ನು ಗೌರವಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಪಿಡಿಒ ರಾಮಚಂದ್ರಪ್ಪ, ಸಂಘದ ಗೌರವಾಧ್ಯಕ್ಷ ರವೀಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರಶೆಟ್ಟಿ, ಪತ್ರಕರ್ತ ರವಿ ಬಿದನೂರು, ಹಿರಿಯ ಕಾರ್ಮಿಕ ಅಬ್ಬಾಸ್ ನೂಲಿಗ್ಗೇರಿ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಲ್, ಉಪಾಧ್ಯಕ್ಷ ಅಸೇನಾರ್, ಪ್ರತಿನಿಧಿಗಳಾದ ಯಡೂರು ನಾಗರಾಜ್, ನರಸಿಂಹ ಹುಲಿಕಲ್, ಎಸ್.ಕೆ.ಸತೀಶ ನಿಲ್ಸಕಲ್, ವೈ.ಎಸ್.ಮಂಜುನಾಥ ಸುಳುಗೋಡು, ಸುರೇಶ ಸೊನಲೆ ಸುರೇಂದ್ರ, ಮಂಜುನಾಥ ಶೆಟ್ಟಿ, ಅಬೂಬಕರ್, ಬಶೀರ್, ಕುಮಾರ್, ಇ.ಭಾಸ್ಕರ್, ಮನೋಹರ್, ಕೆ.ಕಿರಣ, ವಿ.ಹರೀಶ್, ಇಂದಿರಾ ಇತರರಿದ್ದರು. ವೀಣಾ ರಾಘವೇಂದ್ರ ಸ್ವಾಗತಿಸಿದರು. ಇಂದಿರಾ ವಂದಿಸಿದರೆ, ಎಂ.ವಿಶ್ವನಾಥ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net