ನಿರ್ಮಾಣ ಹಂತದ ತಡೆಗೋಡೆ ಕುಸಿತ

2_Athni-Web
ಅಥಣಿ ಪುರಸಭೆಯ ಜೋಡುಕೆರೆಯ ನಿರ್ಮಾಣ ಹಂತದ ತಡೆಗೋಡೆ ಕುಸಿದಿದ್ದರಿಂದ ಟಿಪ್ಪರ್ ಉರುಳಿರುವುದು.
Published on

ಅಥಣಿ: ಪಟ್ಟಣದ ಪುರಸಭೆಯ ಜೋಡುಕೆರೆಯ ನಿರ್ಮಾಣ ಹಂತದ ತಡೆಗೋಡೆ ಶುಕ್ರವಾರ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆ ಅನುದಾನದಲ್ಲಿ ಸುಮಾರು 1 .20 ಕೋಟಿ ರೂ.ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ನಡೆಯುತ್ತಿತ್ತು. ಪಕ್ಕದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಉರುಳಿಬಿದ್ದಿದೆ. ಪುರಸಭೆಯ ಮುಖ್ಯಾಧಿಕಾರಿ ಹಾಗೂ ಅಭಿಯಂತರನ್ನು ಸಂಪರ್ಕಿಸಲು ಪ್ರಯತ್ನಿದರೆ ಒಬ್ಬರ ಮೊಬೈಲ್ ಸ್ವಿಚ್ಡ್ ಆಫ್ ಹಾಗೂ ಇನೊಬ್ಬರು ಕರೆ ಸ್ವೀಕರಿಸಲಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಮತ್ತು ಕಾಮಗಾರಿ ಪರೀಕ್ಷಿಸಿದ ಅಧಿಕಾರಿ, ಅಭಿಯಂತರ ಮೇಲೆ ಕ್ರಮ ಜರುಗಿಸಬೇಕೆಂದು ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಮುಖಂಡ ಪ್ರಶಾಂತ ತೋಡಕರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net