ಬಿ.ಎಚ್.ಕೈಮರ ಶಾಖೆಯಲ್ಲಿ ಗೋದಾಮು ನಿರ್ಮಾಣ

nrp 3 (5)
Published on

ಎನ್.ಆರ್.ಪುರ: ತಾಲೂಕಿನ ಸೀತೂರು ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಕೇಂದ್ರ ಕಚೇರಿ ಹಾಗೂ ವ್ಯಾಪಾರ ಮೂರು ಶಾಖೆಗಳಿಂದ ಒಟ್ಟು 7.79 ಕೋಟಿ ರೂ.ವ್ಯವಹಾರ ನಡೆಸಿದೆ ಎಂದು ಸೀತೂರು ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಮೋಹನ್ ಹೇಳಿದರು.

ಸೀತೂರು ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಘದಲ್ಲಿ ಈಗ 1650 ಸದಸ್ಯರಿದ್ದಾರೆ. 710 ಸದಸ್ಯರಿಗೆ 8 ಕೋಟಿ ರೂ.ಸಾಲ ನೀಡಲಾಗಿದೆ. 450 ಸಣ್ಣ ರೈತರಿಗೆ 4.28 ಕೋಟಿ ರೂ. ಸಾಲ ನೀಡಲಾಗಿದೆ. ಸಂಘವು ಪ್ರಸ್ತುತ 11ಕ್ಕೂ ಹೆಚ್ಚು ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಬಿ.ಎಚ್.ಕೈಮರ ಶಾಖೆಯಲ್ಲಿ ಗೋದಾಮು ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ, ವೈದ್ಯಕೀಯ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಗೌರವಿಸಲಾಯಿತು. ಸೀತೂರು ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ಅನಿಲ್‌ಕುಮಾರ್, ಉಪಾಧ್ಯಕ್ಷೆ ಎಂ.ಎಸ್.ಗೀತಾ, ನಿರ್ದೇಶಕರಾದ ವೈ.ಎಸ್.ಸುಬ್ರಹ್ಮಣ್ಯ, ಎಚ್.ವಿ.ಸಂದೀಪಕುಮಾರ್, ಉಪೇಂದ್ರರಾವ್, ಕೆ.ಎಂ.ಜಗದೀಶ್, ಎಚ್.ಎನ್.ಸತೀಶ್. ಕೆ.ಜಿ.ರಮೇಶ್, ವೈ.ವಿ.ಲೋಲಾಕ್ಷಿ, ಜಿ.ಕೆ.ಜಯರಾಂ, ಸುಧಾಕರ್, ಎಚ್.ಎಚ್.ನಾರಾಯಣ, ಡಿಸಿಸಿಬ್ಯಾಂಕ್ ಮೇಲ್ವೀಚಾರ ಪದ್ಮನಾಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net