ವಾಲ್ಮೀಕಿ ಭವನ ನಿರ್ಮಾಣಕ್ಕೆ ಗ್ರಹಣ

06 09 2025_BGR_RURAL_FLAP_6A
Published on

ವೆಂಕಟರಾಜು.ಎಸ್​ ದೊಡ್ಡಬಳ್ಳಾಪುರ

ನಗರದ ತೇರಿನ ಬೀದಿ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಭವ್ಯವಾದ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಅಪೂರ್ಣಗೊಂಡಿದೆ. ಕಳೆದ ಮೂರು ವರ್ಷಗಳಿಂದ ಕಟ್ಟಡ ಪೂರ್ಣವಾಗದೆ ಅರ್ಧಕ್ಕೆ ನಿಂತಿದೆ. ತಾಲೂಕಿನ ನಾಯಕ ಸಮುದಾಯ ಸೇರಿ ಬಡ ಜನರಿಗೆ ಯಾವುದೇ ಶುಭ ಸಮಾರಂಭಗಳನ್ನು ನಡೆಸಲು ಜಾಗದ ಕೊರತೆ ಉಂಟಾಗಿತ್ತು. ನಾಯಕ ಸಮಾಜದ ಆಶಯದಂತೆ ಭವನ ನಿರ್ಮಾಣಕ್ಕೆ ಒಂದು ಎಕರೆ ಜಮೀನು ಮತ್ತು ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಟ್ಟಡಕ್ಕೆ ಮೂರು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಲಾಗಿತ್ತು. ಇದೀಗ ಕಟ್ಟಡದ ಅಂತ್ಯದಲ್ಲಿ ಪ್ಲಾಸ್ಟಿಂಗ್​, ಸುಣ್ಣಬಣ್ಣ, ಟೈಲ್ಸ್​ ಕೆಲಸ ಮಾಡಲು ಹಣವಿಲ್ಲದೆ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

ಒಂದು ಎಕರೆ ಜಮೀನು, ಒಂದೂವರೆ ಕೋಟಿ ಅನುದಾನ: ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬುದು ಸಮಾಜದ ಬೇಡಿಕೆಯಾಗಿತ್ತು. ಮಾಜಿ ಶಾಸಕರ ಅವಧಿಯಲ್ಲಿ ನಗರದ ತೇರಿನ ಬೀದಿ ವೃತ್ತದ ಬಳಿ ತಾಲೂಕು ಆಡಳಿತದಿಂದ ಒಂದು ಎಕರೆ ಜಮೀನು ಗುರುತಿಸಿ, ಕಟ್ಟಡ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಯಾಗಿ ಭೂಮಿ ಪೂಜೆ ನೆರೆವೇರಿಸಿ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆರಂಭದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸಮುದಾಯ ಭವನ ಆದಷ್ಟು ಬೇಗನೆ ಪೂರ್ಣಗೊಂಡು ಲೋಕಾರ್ಪಣೆಯಾಗುತ್ತದೆ ಎನ್ನುವ ನಿರೀೆಯನ್ನು ಜನರು ಹೊಂದಿದ್ದರು.ಆದರೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಪುಂಡಪೋಕರಿಗಳ ತಾಣವಾದ ಭವನ: ಈಗ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ ಇರುವ ಪರಿಣಾಮವಾಗಿ ಕಟ್ಟಡ ತನ್ನ ಅಸ್ತಿತ್ವ ಕಳೆದುಕೊಳ್ಳುವತ್ತ ಸಾಗಿದೆ. ಭವನದ ಸುತ್ತಲೂ ಗಿಡಗಂಟಿಗಳು ಬೆಳೆದು ಹಾವು ಚೇಳುಗಳ ಆವಾಸಸ್ಥಾನವಾಗಿದೆ. ಅಲ್ಲದೆ ಪುಂಡ ಪೋಕರಿಗಳಿಗೆ, ಮದ್ಯಪಾನ ಮಾಡಲು ಅಕ್ರಮ ಚಟುವಟಿಕೆ, ಮಲ ಮೂತ್ರ ವಿಸರ್ಜನೆ ಮಾಡುವ ಅಡ್ಡೆಯಾಗಿ ಪರಿವರ್ತನೆಯಾಗಿದೆ.

ಶಾಸಕರ ಭೇಟಿ : ಶಾಸಕ ಧೀರಜ್​ ಮುನಿರಾಜು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಭವನ ವೀಸಿ ಅಧಿಕಾರಿಗಳ ಕಾರ್ಯವೈಖರಿಗೆ ಚಾಟಿ ಬೀಸಿದ್ದಾರೆ. ಭವನಕ್ಕೆ ಸುರಕ್ಷತೆ ಇಲ್ಲದೆ ಪುಂಡಪೋಕರಿಗಳ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿರುವುದನ್ನು ಕಂಡು ಗುತ್ತಿಗೆದಾರ ನಿರ್ಮಿತಿ ಕೇಂದ್ರದವರಿಗೆ ಕ್ಲಾಸ್​ ತೆಗೆದುಕೊಂಡು, ಗಿಡಗಂಟಿ ತೆರವು, ಕಟ್ಟಡ ಸಂಪೂರ್ಣ ಸ್ವಚ್ಚಗೊಳಿಸಿ ರಸ್ತೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಮಾಜಿ ಶಾಸಕ ವೆಂಕಟರಮಣಯ್ಯ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ 1 ಎಕರೆ ಜಮೀನು, 1.5 ಕೋಟಿ ರೂ. ಅನುದಾನ ಕೊಡಿಸಿದ್ದರು. ಉಳಿದ ಅನುದಾನ ಬಿಡುಗಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​ ಮುನಿಯಪ್ಪಗೆ ಮನವಿ ಮಾಡಲಾಗಿದೆ. ಸಚಿವರು 25 ಲಕ್ಷ ರೂ. ಅನುದಾನವನ್ನ ಒದಗಿಸುವ ಭರವಸೆ ನೀಡಿದ್ದಾರೆ. ಶಾಸಕ ಧೀರಜ್​ ಮುನಿರಾಜು ಕಳೆದ ವಾಲ್ಮೀಕಿ ಜಯಂತಿಯ ವೇದಿಕೆಯಲ್ಲಿ ಅನುದಾನ ನೀಡುವ ಮಾತು ನೀಡಿದ್ದರು. ಶ್ರೀವಾಗಿ ಒದಗಿಸಿದರೆ ಅನುಕೂಲವಾಗುತ್ತದೆ. ಉಳಿದ ಹಣವನ್ನು ಸಮಾಜ ಮುಖಂಡರ ಸಹಕಾರದಿಂದ ದಾನಿಗಳಿಂದ ಸಂಗ್ರಹ ಮಾಡಿ ಶ್ರೀವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿವುದು. > ಮುನಿಕೃಷ್ಣಪ್ಪ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್​ ಎಸ್​.ಟಿ ಟಕ. ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪರಿಶಿಷ್ಟ ವರ್ಗದವರಿಗೆ ಸಿಗುವ 24 ಲಕ್ಷ ರೂಪಾಯಿಯನ್ನು ವಾಲ್ಮೀಕಿ ಭವನಕ್ಕೆ ನೀಡಲಾಗುವುದು. ನಗರಸಭೆಯಿಂದಲೂ ಅನುದಾನ ಒದಗಿಸಲು ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರಿಗೆ ತಿಳಿಸಿದ್ದೇನೆ. ಕಟ್ಟಡದ ಸುರಕ್ಷತೆ, ಸ್ವಚ್ಚತೆಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಮತ್ತೊಮ್ಮೆ ಪೂಜೆ ಮಾಡಿ ಕಾಮಗಾರಿ ಅತ್ಯಂತ ಶ್ರೀವಾಗಿ ಪೂರ್ಣಗೊಳಿಸಲಾಗುವುದು. > ಧೀರಜ್​ ಮುನಿರಾಜು ಶಾಸಕ ಈ ಬಗ್ಗೆ ಗಮನಕ್ಕೆ ಬಂದಿದೆ. ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಅದಷ್ಟು ಶ್ರೀವಾಗಿ ಕಟ್ಟಡ ಪೂರ್ಣಗೊಳಿಸಲು ಕ್ರಮ ಜರುಗಿಸಲಾಗುವುದು. > ಉಮಾಪತಿ ನಿರ್ದೇಶಕ, ತಾಲೂಕು ಸಮಾಜ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net