

ನವಲಗುಂದ: ಮಹರ್ಷಿ ವಾಲ್ಮೀಕಿ ಅವರು ಮೊದಲ ಮಹಾಕಾವ್ಯ ರಾಮಾಯಣ ರಚಿಸಿದ ಆದಿಕವಿ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತ ಹಾಗೂ ವಾಲ್ಮೀಕಿ ಸಮಾಜದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವಲಗುಂದ ಬಸವೇಶ್ವರ ನಗರದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನೂತನ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ. ಈ ಹಿಂದೆ ನವಲಗುಂದ ನಗರದಲ್ಲಿ ಭವ್ಯ ವಾಲ್ಮೀಕಿ ಭವನ ನಿರ್ವಣಕ್ಕೆ 2.80 ಕೋಟಿ ರೂ., ಈ ವರ್ಷ 85 ಲಕ್ಷ ರೂಪಾಯಿ ಕಾಂಪೌಂಡ್ ನಿರ್ವಣಕ್ಕಾಗಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ಅಲ್ಲದೆ, ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಲ್ಮೀಕಿ ಭವನ, ಸಮುದಾಯದ ಕಾಲನಿಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ತಹಸೀಲ್ದಾರ್ ಸುಧೀರ ಸಾವಕಾರ, ಪಿಎಸ್ಐ ಜನಾರ್ದನ ಬಿ., ತಾಪಂ ಇಒ ಭಾಗ್ಯಶ್ರೀ ಜಾಗೀರದಾರ, ಅಬಕಾರಿ ನಿರೀಕ್ಷಕ ರಾಮಸಿದ್ದಪ್ಪ ಆರೆನ್ನವರ, ಬಿಇಒ ಎಸ್.ಬಿ. ಮಲ್ಲಾಡ, ಅಂಜುಮನ್ ಅಧ್ಯಕ್ಷ ಅಲ್ಲಸಾಬ್ ಕಲಕುಟ್ರಿ, ಬೋನಪ್ಪ ತಳವಾರ, ಜಿಪಂ ಮಾಜಿ ಅಧ್ಯಕ್ಷೆ ಶಾಂತವ್ವ ಗುಜ್ಜಳ, ಸಮಾಜದ ಮುಖಂಡರಾದ ನಿಂಗಪ್ಪ ನಾಯ್ಕರ, ಸುಭಾಸ ದುಬ್ಬದಮಟ್ಟಿ, ಮಹಾಲಕ್ಷ್ಮೀ ಮದಗುಣಕಿ, ಫಕೀರಪ್ಪ ತಳವಾರ, ಆರ್.ಎನ್. ಚಿಗರಿ, ಕುಮಾರ ಮಾದರ, ಸಂತೋಷ ಗುಜ್ಜಳ, ನಂದಿನಿ ಹಾದಿಮನಿ, ನರಸಿಂಹ ಇನಾಮತಿ, ದೇವಪ್ಪ ಉಡಚಣ್ಣವರ, ಜಗದೀಶ ಗುಜ್ಜಳ, ಹೊನಕೇರಪ್ಪ ದಿಂಡಲಕೊಪ್ಪ, ಮಂಜುನಾಥ, ಪುರಸಭೆ ಸದಸ್ಯರಾದ ಮೋದಿನ್ ಶಿರೂರ, ಹುಸೇನಬಿ ಧಾರವಾಡ, ಶಿವು ನಾಯ್ಕರ ಇತರರು ಉಪಸ್ಥಿತರಿದ್ದರು.