ಮಜಿ ಶಾಲೆಯಲ್ಲಿ ಶೌಚಗೃಹ ನಿರ್ಮಾಣ

13
Published on

ಬಂಟ್ವಾಳ: ತಾಲೂಕಿನ ವೀರಕಂಬ ಗ್ರಾಮದ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗ ಅನುದಾನದಿಂದ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶ್ರಮದಾನದ ಮೂಲಕ ಶೌಚಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕ ಸಿಂಗೇರಿ, ನಿಕಟಪೂರ್ವ ಅಧ್ಯಕ್ಷ ಸಂಜೀವ ಮೂಲ್ಯ ಮಜಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸುಧಾಕರ್ ವೀರಕಂಬ, ವಿಶ್ವನಾಥ್ ಎರ್ಮೆಮಜಲು, ಶೌರ್ಯ ಘಟಕ ಅಧ್ಯಕ್ಷ ಮಾಧವ ಸಾಲ್ಯಾನ್ ಕುದ್ರೆಬೆಟ್ಟು, ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ಶೌರ್ಯ ಘಟಕ ಸಂಯೋಜಕಿ ವಿದ್ಯಾ, ವೀರಕಂಬ ಒಕ್ಕೂಟ ಸೇವಾ ಪ್ರತಿನಿಧಿ ವಿಜಯ, ಶೌರ್ಯ ಘಟಕ ಸದಸ್ಯರಾದ ರಮೇಶ್ ಕುದ್ರೆಬೆಟ್ಟು, ಧನಂಜಯ ಬೊಂಡಲ, ಸಂತೋಷ್ ಬೊಲ್ಪೊಡಿ, ಚಿನ್ನಾ ಕಲ್ಲಡ್ಕ, ಮೇಸ್ತ್ರಿ ತಿಮ್ಮಪ್ಪ ಗೌಡ ಮಜಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net