ಸರ್ಕಾರಿ ಶಾಲೆಯಲ್ಲಿ ಶೌಚಗೃಹ ನಿರ್ಮಾಣ

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಕಾಲನಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಪ್ಟಿಮ್ಯಾಕ್ಸ್ ರೈಟ್ ಟು ಲೀವ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡಿರುವ ಶೌಚಗೃಹವನ್ನು ಸಂಸ್ಥೆಯ ವಿನಯ್ ನಾರಾಯಣಸ್ವಾಮಿ ಉದ್ಘಾಟಿಸಿದರು. ಬಿಇಒ ಮಾರಯ್ಯ ಸೇರಿದಂತೆ ಇತರರು ಇದ್ದರು.
Oplus_131072
Construction of toilets in government school
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಕಾಲನಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಆಪ್ಟಿಮ್ಯಾಕ್ಸ್ ರೈಟ್ ಟು ಲೀವ್ ಸಂಸ್ಥೆಯ ವತಿಯಿಂದ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶೌಚಗೃಹವನ್ನು ಸೋಮವಾರ ಸಂಸ್ಥೆಯ ವಿನಯ್ ನಾರಾಯಣಸ್ವಾಮಿ, ಬಿಇಒ ಮಾರಯ್ಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿನಯ್‌ನಾರಾಯಣಸ್ವಾಮಿ ಮಾತನಾಡಿ, ಶಾಲೆಯಲ್ಲಿ ಬುಡಕಟ್ಟು ಸೋಲಿಗ ಜನಾಂಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆಯ ವತಿಯಿಂದ ಇಂತಹ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದ್ದು. ಇಲ್ಲಿನ ಮಕ್ಕಳಿಗೆ ಶೌಚಗೃಹದ ಕೊರತೆ ಇದ್ದ ಹಿನ್ನೆಲೆಯಲ್ಲಿ ನಿರ್ಮಿಸಿಕೊಡುವಂತೆ ಶಿಕ್ಷಕರು ಮನವಿ ಮಾಡಿದ್ದರು. ಹಾಗಾಗಿ ಇಲ್ಲಿನ ಮಕ್ಕಳ ಉಪಯೋಗಕ್ಕಾಗಿ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರು ಇದರ ಬಳಕೆ ಹಾಗೂ ಇದರ ನಿರ್ವಹಣೆಯನ್ನು ಮಾಡುವುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಸಹಾಯ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಲ್ಲಿ ಬಡ, ಬುಡಕಟ್ಟು ಜನಾಂಗದ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 55 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದು ಶೌಚಗೃಹದ ಅವಶ್ಯಕತೆ ಇಲ್ಲಿಗೆ ಬೇಕಿತ್ತು. ಆಪ್ಟಿಮ್ಯಾಕ್ಸ್ ರೈಟ್ ಟು ಲೀವ್ ಸಂಸ್ಥೆಯವರು ಇಲ್ಲಿಗೆ ಶೌಚಗೃಹ ನಿರ್ಮಿಸಿರುವುದಕ್ಕೆ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮುಖ್ಯ ಶಿಕ್ಷಕ ಜಯಶಂಕರ್ ಈ ಶಾಲೆಗೆ ಸುತ್ತುಗೋಡೆಯ ಅವಶ್ಯಕತೆ ಇದ್ದು ಇದನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆಯ ವಿನಯ್ ನಾರಾಯಣಸ್ವಾಮಿ ಅವುರು ಈ ಬಗ್ಗೆ ಸಂಸ್ಥೆಯ ಇತರ ಪದಾಧಿಕಾರಿಗಳ ಜತೆ ಚರ್ಚಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಸಿ.ಡಿ.ಮಹದೇವ, ಮಾಜಿ ಅಧ್ಯಕ್ಷ ಪ್ರತೀಪ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ದೈಹಿಕ ಶಿಕ್ಷಣ ಪರಿವೀಕ್ಷಕ, ಶಾಂತರಾಜು, ಶಿಕ್ಷಣ ಸಂಯೋಜಕ ಕುಮಾರ್, ಪ್ರಶಾಂತ್‌ಗೌಡ, ಸಿಆರ್‌ಪಿ ಎಸ್. ರೇಚಣ್ಣ ಶಿಕ್ಷಕರಾದ ರಾಜೇಂದ್ರ, ಸುಮಾ, ತುಳಸಿ, ಜಯಕಾಂತಮ್ಮ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net