

* ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಹೇಳಿಕೆ
* 41 ಅಡಿ ಎತ್ತರದ ಶ್ರೀ ಅಭಯಾಂಜನೇಯ ಸ್ವಾಮಿಯ ಪ್ರತಿಮೆ ಲೋಕಾರ್ಪಣೆ
ಮಾಗಡಿ
ದೇಶದಲ್ಲಿ ಆಂಜನೇಯ ದೇವರ ಪ್ರತಿಮೆಗಳು ಹೆಚ್ಚು, ಹೆಚ್ಚು ನಿರ್ಮಿಸುತ್ತಿರುವುದು ಐಕ್ಯತೆಯ ಸಂಕೇತ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಹೇಳಿದರು.
ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದ ಶ್ರೀಶನೈಶ್ಚರ ಸ್ವಾಮಿ, ಶ್ರೀಮುನೇಶ್ವರ ಸ್ವಾಮಿಯ 27ನೇ ವರ್ಷದ ಜಾತ್ರಾಮಹೋತ್ಸವ ಹಾಗೂ 41 ಅಡಿ ಎತ್ತರದ ಶ್ರೀ ಅಂಜನೇಯ ಸ್ವಾಮಿಯ ನೂತನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸನಾತನ ಹಿಂದು ಧರ್ಮದಲ್ಲಿ ದೇವಾಲಯಗಳಿಗೆ ಮಹತ್ವವಾದ ಸ್ಥಾನವಿದೆ, ದಿನೇದಿನೆ ‘ಧಾರ್ಮಿಕ ಆಚರಣೆಗಳು ಗಟ್ಟಿಗೊಳ್ಳುತ್ತಿರುವುದರಿಂದ ದೇಶದಲ್ಲಿ ಶಾಂತಿ, ನೆಮ್ಮದಿ, ಐಕ್ಯತೆ, ಸಹಬಾಳ್ವೆ ಮೂಡುತ್ತಿದೆ. ಇಂತಹ ಸೇವಾ ಕಾರ್ಯಗಳು ದೇವಾಲಯದಲ್ಲಿ ನಿರಂತರವಾಗಿ ನಡೆಯಲಿ ಎಂದರು.
ಮನುಷ್ಯನ ಜನ್ಮ ಪಾವನವಾಗಲು ದೇವರ ಜ್ಞಾನ, ಜಪ ಮಾಡಬೇಕು, ಆ‘ುನಿಕ ಪ್ರಪಂಚದಲ್ಲಿ ಆಡಂಬರದ ಪೂಜೆಗಳು ನಡೆಯುತ್ತಿವೆ. ಇದು ವಿಪರ್ಯಾಸದ ಸಂಗತಿ, ‘ಾರ್ಮಿಕ ಆಚರಣೆಗಳು ಜೀವನದ ಮೌಲ್ಯವನ್ನು ಎತ್ತಿಹಿಡಿಯುತ್ತವೆ. ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರಬೆಳೆಸಿಕೊಂಡು ಸಾಮಾಜಿಕ ಮೌಲ್ಯವನ್ನು ಕಾಪಾಡಬೇಕು. ಮನುಷ್ಯನ ‘ಕ್ತಿ ಶಿವನಿಗೆ ಅರ್ಪಿತವಾಗಬೇಕು. ಆಗ ಮಾತ್ರ ಶಿವನ ಸಾಕ್ಷಾತ್ಕಾರವಾಗುತ್ತದೆ ಎಂದರು.
ಮನುಷ್ಯ ಸರಳ ಜೀವನವನ್ನು ರೂಢಿಸಿಕೊಳ್ಳಬೇಕು. ಮನುಷ್ಯನಿಗೆ ಶಾಂತಿ, ನೆಮ್ಮದಿ ಸಿಗಬೇಕಾದರೆ ದೇವರ ‘ಧ್ಯಾನದಿಂದ ಮಾತ್ರ ಸಾಧ್ಯ. ಪರಮಾತ್ಮನನ್ನು ನಾವು ಕಾಣಬಹುದಾಗಿದೆ. ದೇವರ ಆರಾ‘ನೆಯಿಂದ ಮನುಷ್ಯನಿಗೆ ಮುಕ್ತಿ ಸಿಗುತ್ತದೆ. ನಾವೆಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಬೇಕು, ನ್ಯಾಯ, ನೀತಿ, ಧರ್ಮದ ಪಾಲನೆ ಮಾಡಬೇಕು, ಪ್ರಕೃತಿ ದತ್ತಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಆಗಮಾತ್ರ ಮಾನವ ಜನ್ಮ ಸಾರ್ಥಕ ಬದುಕಿಗೆ ನಾಂದಿಯಾಗುತ್ತದೆ. ಸತ್ಯ, ಅಚಾರ ವಿಚಾರಗಳನ್ನು ಮೈಗೂಡಿಸಿಕೊಂಡರೆ ಜೀವನ ಸ್ವರ್ಗಮಯವಾಗುತ್ತದೆ ಎಂದರು.
ಶಿರಾದ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವ‘ಧೂತ ಸ್ವಾಮೀಜಿ ಮಾತನಾಡಿ, ‘ಭಾರತ ಸಾಕಷ್ಟು ಸವಾಲುಗಳನ್ನು ಎದುರಿಸಿ ನಿಂತಿದೆ. ನಮ್ಮ ಸಂಸ್ಕೃತಿ, ನೆಲದ ಪರಂಪರೆ, ಇತಿಹಾಸದಿಂದ ನಾವೆಲ್ಲರೂ ನೆಮ್ಮದಿಯಾಗಿದ್ದೇವೆ ಎಂದರು.
ಶ್ರೀ ಶನೈಶ್ಚರ ಸ್ವಾಮಿ, ಶ್ರೀಮುನ್ನೇಶ್ವರ ಸ್ವಾಮಿ, ಕೆಂಚನಹಳ್ಳಿ ಲಕ್ಷ್ಮೀ ದೇವಿ, ಬಿಲ್ಲಿಕೋಟೇಮ್ಮ, ಸೋಮೇನಾಳಮ್ಮಸ್ವಾಮಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ಗ್ರಾಮದ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನಡೆಯಿತು. ರಾಜ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಿತು. ಚಿಕ್ಕಮಗಳೂರಿನ ಕಣುವೆ ದಾಸರ ಹಳ್ಳಿಯ ಬಸವಣ್ಣ ಆಗಮಿಸಿತು.
ಬಗಿನಗೆರೆ ಕುಮಾರ್, ಎಚ್.ಎಂ.ಕೃಷ್ಣಮೂರ್ತಿ, ಜನಸ್ನೇಹಿ ಯೋಗೇಶ್, ರಂಗೇಶ್, ಜಗದೀಶ್ ಚೌದರಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್, ಹನುಮಂತಯ್ಯ, ಕೃಷ್ಣಮೂರ್ತಿ, ಕೆಂಚನಹಳ್ಳಿ ಕಿರಣ್, ಜಯಕುಮಾರ್ ಜೆಕೆ. ಡಿ.ಜಿ.ಗಂಗಾಧರ್, ಡಿ.ಜಿ.ಬಸವರಾಜು ಇತರರು ಇದ್ದರು.