1 ಕೋಟಿ ರೂ.ವೆಚ್ಚದಲ್ಲಿ ಶಾದಿಮಹಲ್ ನಿರ್ಮಾಣ

02bhr 2 (1)
ಬಾಳೆಹೊನ್ನೂರು ಸಮೀಪದ ಮಾಗುಂಡಿಯಲ್ಲಿ ನೂತನ ಶಾದಿ ಮಹಲ್ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಅಬ್ದುಲ್ ವಹೀದ್ ಅಹ್ಮದ್, ಸುದೇಶ್, ಅಭಿಷೇಕ್, ಕವಿತ್‌ಕುಮಾರ್, ಲತೀಫ್ ಇದ್ದರು.
Published on

ಬಾಳೆಹೊನ್ನೂರು: ಮಾಗುಂಡಿಯ ಜುಮ್ಮಾ ಮಸೀದಿ ಆವರಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 1 ಕೋಟಿ ರೂ.ವೆಚ್ಚದಲ್ಲಿ ಶಾದಿಮಹಲ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ, ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಮಾಗುಂಡಿಯ ಜುಮ್ಮಾ ಮಸೀದಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಶಾದಿಮಹಲ್ ಕಟ್ಟಡಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಮುದಾಯದವರ ಬಳಕೆ ಉದ್ದೇಶಕ್ಕಾಗಿ ಜುಮ್ಮಾ ಮಸೀದಿ ಆವರಣದಲ್ಲಿ ಸಮುದಾಯ ಬಾಂಧವರ ಕೋರಿಯಂತೆ ಶಾದಿ ಮಹಲ್ ನಿರ್ಮಾಣಕ್ಕಾಗಿ ಅನುದಾನ ಮಂಜೂರುಗೊಂಡಿದ್ದು, ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಶೀಘ್ರವಾಗಿ ಕಾಮಗಾರಿಗಳು ಆರಂಭಗೊಂಡು ಮುಸಲ್ಮಾನ್ ಸಮುದಾಯದವರ ಬಳಕೆಗೆ ಉಪಯೋಗಲಿ ಎಂಬ ಹಾರೈಕೆ ನಮ್ಮದು. ಮುಂದಿನ ದಿನಗಳಲ್ಲಿ ಮಾಗುಂಡಿ ಗ್ರಾಮಕ್ಕೆ ಇನ್ನೂ ಹಲವಾರು ಯೋಜನೆಗಳನ್ನು ತಂದು ಅಭಿವೃದ್ಧಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.
ಜುಮ್ಮಾ ಮಸೀದಿ ಆವರಣದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪೂರ್ಣಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ಅಬ್ದುಲ್ ವಹೀದ್ ಅಹ್ಮದ್, ಕೆ.ಟಿ.ಸುದೇಶ್, ಅಭಿಷೇಕ್ ಸಮೃದ್ಧ್, ಕವಿತ್‌ಕುಮಾರ್, ಅಬ್ದುಲ್ ಲತೀಫ್, ಪ್ರಮೀಳಾ ಸೆರಾವೋ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net