

ತಿ.ನರಸೀಪುರ: ಪುರಾತನ ಪ್ರಸಿದ್ಧ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿತ್ಯವೂ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ವಾಸ್ತವ್ಯಕ್ಕೆ ಕೊಠಡಿಗಳನ್ನು ನಿರ್ಮಿಸಲಾಗುವುದು ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ಇತ್ತೀಚೆಗೆ 10 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ತ್ರಿವೇಣಿ ಸಂಗಮದ ಶ್ರೀಗುಂಜಾ ನರಸಿಂಹಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರವಾಗಿದ್ದು, ಕುಡಿಯುವ ನೀರಿನ ಅಗತ್ಯ ಅರಿತು ಸಚಿವ ಮಹದೇವಪ್ಪ ಅವರು ಭಕ್ತರಿಗೆ ಶುದ್ಧ ಕುಡಿಯುವ ನೀರು ನೀಡಬೇಕೆಂಬ ಸದುದ್ದೇಶದೊಂದಿಗೆ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಉಳಿಕೆ 5 ಲಕ್ಷ ರೂ.ಗಳನ್ನು ದೇವಸ್ಥಾನದ ಆಡಳಿತ ಮಂಡಳಿ ನೀಡಿ ಕುಡಿಯುವ ನೀರಿನ ಕೇಂದ್ರ ಕಾಮಗಾರಿ ಪೂರ್ಣಗೊಳಿಸಲಿದೆ ಎಂದು ತಿಳಿಸಿದರು.
ತಿರುಮಕೂಡಲು ನರಸೀಪುರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ದೇವಸ್ಥಾನದ ಆಸುಪಾಸಿನಲ್ಲಿ ಭಕ್ತರು ಉಳಿದುಕೊಳ್ಳಲು ಯಾತ್ರಿ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಸುನೀಲ್ ಬೋಸ್ ತಿಳಿಸಿದರು.
ಪುರಸಭಾ ಅಧ್ಯಕ್ಷೆ ವಸಂತಾ ಶ್ರೀಕಂಠ, ಡಾ ಮಹದೇವಪ್ಪ ಅಭಿಮಾನಿಗಳ ಜಿಲ್ಲಾಧ್ಯಕ್ಷ ಕೆ.ಎಂ.ಮಧುಕುಮಾರ್, ಗುತ್ತಿಗೆದಾರ ಕೆಂಪಯ್ಯನಹುಂಡಿ ಮಾಧು, ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಪಾರುಪತ್ತೇಗಾರ ಪ್ರದೀಪ್, ದೊಡ್ಡಪುರ ನಂಜಯ್ಯ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಜೆ.ಅನೂಪ್ ಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಗುರುಮಲ್ಲ, ಎಂ.ಬಿ ಸಾಗರ್, ತಾ.ಪಂ ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ಕೆಬ್ಬೆ ಶಿವಸ್ವಾಮಿ, ರಂಗಸ್ವಾಮಿ, ಸಂಸದರ ಆಪ್ತ ಸಹಾಯಕ ಬಿ.ಬಸವರಾಜು, ಗ್ರಾ.ಪಂ ಸದಸ್ಯ ಮಾದೇಶ, ಮಾಜಿ ಉಪಾಧ್ಯಕ್ಷ ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಎಚ್.ಸಿ.ರತೀಶ್, ಪಿ.ಎನ್.ಚರಿತಾ, ಕೆ.ಶಿವರಾಜು, ಸತೀಶ್ ಚಂದ್ರನ್, ಸೆಸ್ಕ್ ಎಇಇ ಕೆ.ವಿ.ವೀರೇಶ್ ಮುಖಂಡರಾದ ಪುಳ್ಳಾರಿ ಮಾದೇಶ, ತೇಜು, ಕೆ.ಅಶ್ವಿನ್ ಕುಮಾರ್, ಕಾಳಬಸವನಹುಂಡಿ ಮಲ್ಲೇಶ, ಕಲಿಯೂರು ಸಿದ್ದರಾಜು ಇತರರು ಇದ್ದರು.
18 ಚಿಥಿ ಣಟಿಠಿ 00
ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಭೂಮಿಪೂಜೆ ನೆರವೇರಿಸಿದರು. ಬಿ.ವಸಂತಾ ಶ್ರೀಕಂಠ, ಮಾಧು, ಲತಾ ಜಗದೀಶ್, ಮಾದೇಶ್, ಪ್ರದೀಪ್ ಇತರರು ಇದ್ದರು.