ಸುಸಜ್ಜಿತ ಸೇತುವೆ ನಿರ್ಮಾಣ

P PURA SETHUVE KAMAGARI 17
Published on

ಪರಶುರಾಮಪುರ: ಪರಶುರಾಮಪುರ-ಪಾವಗಡ ಮಾರ್ಗದ ಕೆರೆಕೋಡಿಯ ಹಳ್ಳ ಹಾಗೂ ಕಡೇಹುಡೆ ಗೇಟ್ ಬಳಿ ಎರಡು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಕೆರೆಕೋಡಿಯ ಹಳ್ಳದ ಬಳಿ ಗುರುವಾರ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ ವರ್ಷ ಮಳೆಗಾಲದಲ್ಲಿ ಹೋಬಳಿ ವ್ಯಾಪ್ತಿಯ ವಿವಿಧೆಡೆ ಹಳ್ಳಗಳು ನೀರಿನಿಂದ ಕೊಚ್ಚಿಕೊಂಡು ಜನ ಜಾನುವಾರುಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಇದನ್ನು ಮನಗಂಡು ಎರಡು ಕೋಟಿ ರೂ. ಅನುದಾನದಲ್ಲಿ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಪಿಡಬ್ಲ್ಯುಡಿ ಎಇಇ ವಿಜಯಭಾಸ್ಕರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎ.ಜಗಳೂರಸ್ವಾಮಿ, ಉರ್ಪಾಧ್ಯಕ್ಷೆ ಸರೋಜಾ ಚಿತ್ತಯ್ಯ, ಸದಸ್ಯರಾದ ಟಿ.ಶ್ರೀನಿವಾಸ, ರುದ್ರೇಶ, ಪ್ರಕಾಶ, ಗುತ್ತಿಗೆದಾರ ಹನುಮಂತಪ್ಪ, ಜಯಣ್ಣ, ಪ್ರಕಾಶ, ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net