

ಮಂಡ್ಯ: ಮಂಡ್ಯ ನಗರದ ಕ್ರೀಡಾಪಟುಗಳು ಬಹುವರ್ಷದ ಬೇಡಿಕೆಯಾಗಿದ್ದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯಸರ್ಕಾರ ಸ್ಪಂದನೆ ಸಿಕ್ಕಿದೆ. ಶಾಸಕ ರವಿಕುಮಾರ್ ಗಣಿಗ ಅವರ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಒಂದು ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಗ್ರೀನ್‌ಮ್ಯಾಟ್ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ.
ನಗರದಲ್ಲಿ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣ ಮಾತ್ರ ಇದೆ. ಆದರೆ ಇಲ್ಲಿ ಎಲ್ಲ ಆಟೋಟಕ್ಕೆ ಬೇಕಾದ ಸೌಲಭ್ಯದ ಜತೆಗೆ ಜಾಗವೂ ಇಲ್ಲ. ಕ್ರಿಕೆಟ್ ಹಾಗೂ ುಟ್‌ಬಾಲ್ ಆಟಗಾರರ ನಡುವೆ ಆಗ್ಗಿಂದಾಗ್ಗೆ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಈ ನಡುವೆಯೂ ಕ್ರಿಕೆಟ್ ಆಟಗಾರರು ಮಂಡ್ಯ ವಿಶ್ವವಿದ್ಯಾನಿಲಯದ ಆವರಣ, ಸರ್ಕಾರಿ ಬಾಲಕಿಯರ ಕಾಲೇಜು(ಕಲ್ಲುಕಟ್ಟಡ), ಮೈಷುಗರ್ ಪ್ರೌಢಶಾಲೆ ಕ್ರೀಡಾಂಗಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಆದಾಗ್ಯೂ ಸರ್‌ಎಂವಿ ಹೊರತುಪಡಿಸಿ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇತ್ತು. ಪ್ರತಿ ಬಾರಿ ಬಜೆಟ್‌ನಲ್ಲಿಯೂ ಇಂತಹದೊಂದು ಬೇಡಿಕೆ ಈಡೇರಬಹುದೆನ್ನುವ ನಿರೀಕ್ಷೆ ಇರುತ್ತಿತ್ತಾದರೂ ೋಷಣೆಯಾಗಿರಲಿಲ್ಲ. ಆದರೀಗ ಶಾಸಕ ರವಿಕುಮಾರ್ ಗಣಿಗ ಅವರ ಪ್ರಯತ್ನದ ಲವಾಗಿ ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಒಂದು ಎಕರೆ ಜಮೀನಿನಲ್ಲಿ ಸುಸಜ್ಜಿತ ಕ್ರೀಡಾಂಗಣಕ್ಕೆ ಅಡಿಗಲ್ಲು ಬೀಳಲಿದೆ.
ಹೈಟೆಕ್ ಕ್ರೀಡಾಂಗಣ: ಹೌಸಿಂಗ್ ಬೋರ್ಡ್‌ನಲ್ಲಿ ನಿರ್ಮಾಣವಾಗಲಿರುವ ಹೈಟೆಕ್ ಕ್ರೀಡಾಂಗಣದಲ್ಲಿ ಹಲವು ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ. ಕ್ರೀಡಾಂಗಣದ ಸುತ್ತ ರಕ್ಷಣೆಗಾಗಿ ಗ್ರೀಲ್ ಅಳವಡಿಕೆ ಮಾಡಲಾಗುತ್ತಿದೆ. ಅಂತೆಯೇ ಗ್ರೀನ್‌ಮ್ಯಾಟ್ ಹಾಸು ಇರಲಿದೆ. ಮಾತ್ರವಲ್ಲದೆ ್ಲಡ್‌ಲೈಟ್ ಹಾಕಲಾಗುತ್ತಿದೆ. ಕ್ರಿಕೆಟ್, ುಟ್‌ಬಾಲ್, ವಾಲಿಬಾಲ್ ಸೇರಿದಂತೆ ಎಲ್ಲ ರೀತಿಯ ಕ್ರೀಡೆಗೆ ಅನುಕೂಲವಾಗುವಂತೆ ಹೈಟೆಕ್ ಮಾದರಿಯಲ್ಲಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಇದಲ್ಲದೆ ವಾಕಿಂಗ್‌ಪಾತ್ ವ್ಯವಸ್ಥೆಗೂ ಆದ್ಯತೆ ನೀಡಲಾಗುತ್ತಿದ್ದು, ಹೆಚ್ಚುವರಿ ಅನುದಾನ ಪಡೆದುಕೊಳ್ಳುವ ಯೋಜನೆ ಇದೆ. ಕ್ರೀಡಾಂಗಣದ ಕಾಮಗಾರಿಯ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಅಂತೆಯೇ ಮೂರು ತಿಂಗಳೊಳಗೆ ಉದ್ಘಾಟನೆ ಮಾಡುವ ಯೋಜನೆ ಮಾಡಿಕೊಳ್ಳಲಾಗಿದೆ.
ಬ್ರ್ಯಾಂಡ್ ಮಂಡ್ಯ ಹೆಸರಿನಲ್ಲಿ ನಗರಕ್ಕೆ ಹೊಸ ರೂಪ ಕೊಡಲಾಗುತ್ತಿದೆ. ಇದರ ಭಾಗವಾಗಿ ಹೌಸಿಂಗ್ ಬೋರ್ಡ್‌ನಲ್ಲಿ ಹೈಟೆಕ್ ಗ್ರೀನ್‌ಮ್ಯಾಟ್ ಕ್ರೀಡಾಂಗಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇದರ ನಿರ್ವಹಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಕಾಮಗಾರಿಗೆಂದು ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿ ಅಂಶ ಇಲಾಖೆಯಿಂದ ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ರವಿಕುಮಾರ್ ಗಣಿಗ ಶಾಸಕ