

ಶಿರಸಿ: ನಗರದ ಮಾರಿಕಾಂಬಾ ದೇವಿ ಜಾತ್ರೆ ಮಾ. 19ರಿಂದ ಆರಂಭಗೊಳ್ಳಲಿದ್ದು, ಇಲ್ಲಿನ ಬಿಡ್ಕಿಬೈಲಿನ ಜಾತ್ರಾ ಗದ್ದುಗೆಯ ಸುತ್ತಮುತ್ತ ಚಪ್ಪರದ ಪ್ರವೇಶದ್ವಾರ, ಮುಖಮಂಟಪ ನಿರ್ಮಾಣ ಹಾಗೂ ಅಲಂಕಾರದ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಕಳೆದ 5 ಜಾತ್ರೆಗಳಿಂದ ಜಾತ್ರಾ ಪ್ರವೇಶದ್ವಾರ ಹಾಗೂ ಮುಖಮಂಟಪ ನಿರ್ಮಿಸುತ್ತ ಬಂದಿರುವ ಉಡುಪಿಯ ಮಂಜುನಾಥ ಇಲೆಕ್ಟ್ರಿಕಲ್ಸ್ನ ರಾಜೇಶ ರಾವ್ ಅವರು ಈ ವರ್ಷವೂ ನಿರ್ಮಾಣ ಕಾರ್ಯ ಮುಂದುವರಿಸಿದ್ದಾರೆ. ಈ ವರ್ಷ ವಿಶೇಷ ವಿನ್ಯಾಸದ ಮಂಟಪ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗುರುವಾರ ಶ್ರೀಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ, ಜಾತ್ರಾ ಚಪ್ಪರದ ಪ್ರವೇಶ ದ್ವಾರ ಹಾಗೂ ಮುಖಮಂಟಪ ನಿರ್ಮಾಣ ಕಾರ್ಯಕ್ಕೆ ಬಾಬುದಾರ ಜಗದೀಶ ಗೌಡ ಅವರೊಡನೆ ಚಾಲನೆ ನೀಡಿದರು.
ಬಾಬದಾರ ಪ್ರಮುಖರಾದ ವಿಜಯ ನಾಡಿಗ, ರಮೇಶ ದಬ್ಬೆ, ರಾಜೇಶ ಹಾಗೂ ಇತರರು ಇದ್ದರು.