ಒಂದು ವರ್ಷದಲ್ಲಿ ದಿವ್ಯಶಾಂತಿ ಮಂದಿರ ನಿರ್ಮಾಣ

ಹುಣಸೂರು ನಗರದ ಬೈಪಾಸ್ ರಸ್ತೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ದಿವ್ಯಮಂದಿರ ಕಟ್ಟಡ ನಿರ್ಮಾಣಕ್ಕೆ ಗಣ್ಯರು ಭೂಮಿಪೂಜೆ ನೆರವೇರಿಸಿದರು. ಶ್ರೀ ನಟರಾಜ ಸ್ವಾಮೀಜಿ, ಲಕ್ಷ್ಮೀ ಬೆಹನ್‌ಜೀ, ಶರವಣ, ಆಶಾ ಕೃಷ್ಣನಾಯಕ, ಸಿರಾಜ್, ವಿ.ಎನ್.ದಾಸ್ ಇದ್ದರು.
ಹುಣಸೂರು ನಗರದ ಬೈಪಾಸ್ ರಸ್ತೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ದಿವ್ಯಮಂದಿರ ಕಟ್ಟಡ ನಿರ್ಮಾಣಕ್ಕೆ ಗಣ್ಯರು ಭೂಮಿಪೂಜೆ ನೆರವೇರಿಸಿದರು. ಶ್ರೀ ನಟರಾಜ ಸ್ವಾಮೀಜಿ, ಲಕ್ಷ್ಮೀ ಬೆಹನ್‌ಜೀ, ಶರವಣ, ಆಶಾ ಕೃಷ್ಣನಾಯಕ, ಸಿರಾಜ್, ವಿ.ಎನ್.ದಾಸ್ ಇದ್ದರು.
Published on

ಹುಣಸೂರು: ಪ್ರತಿ ಮನೆ, ಮನದಲ್ಲೂ ಶಾಂತಿ ನೆಮ್ಮದಿ ನೆಲೆಸುವಂತಾಗಲು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ 88 ವರ್ಷಗಳಿಂದ ದುಡಿಯುತ್ತಿದೆ ಎಂದು ವಿಶ್ವವಿದ್ಯಾಲಯದ ಉಪಲಯದ ಸಂಚಾಲಕಿ ಲಕ್ಷ್ಮೀ ಬೆಹೆನ್‌ಜೀ ತಿಳಿಸಿದರು.

ನಗರದ ಬೈಪಾಸ್ ರಸ್ತೆಯ ಮಂಜುನಾಥಸ್ವಾಮಿ ದೇವಾಲಯ ಬಳಿ 3 ಕೋಟಿ ರೂ. ವೆಚ್ಚದಡಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವವಿದ್ಯಾಲಯದ ನೂತನ ದಿವ್ಯಶಾಂತಿ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜಗತ್ತು ಅಶಾಂತಿಯ ತಾಣವಾಗಿ ಮಾರ್ಪಟ್ಟಿದೆ. ದುಖ, ಭಯ, ಸಮಸ್ಯೆ, ದ್ವೇಷ ವಾತಾವರಣ ತುಂಬಿಕೊಂಡಿದೆ. ಅಶಾಂತಿಯಿಂದ ಕೂಡಿರುವ ಈ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿ ಶಾಂತಿಯ ಕುಂಡ ಸ್ಥಾಪಿಸಬೇಕಿದ್ದು, ನೂತನ ಮಂದಿರದ ನಿರ್ಮಾಣ ಕಾಮಗಾರಿ ಒಂದು ವರ್ಷದಲ್ಲಿ ಸಂಪನ್ನಗೊಳ್ಳಲಿದೆ ಎಂದರು.

ಮೌಂಟ್ ಅಬುವಿನ ಲಲಿತ್‌ಭಾಯ್ ಮಧುಬನ್ ಮಾತನಾಡಿ, ಹುಣಸೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ದಿವ್ಯಮಂದಿರವನ್ನು ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

ಗಾವಡಗೆರೆಯ ಶ್ರೀ ಗುರುಲಿಂಗಜಂಗದಮೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಮಾತನಾಡಿ, ಮನುಷ್ಯ-ಮನುಷ್ಯರ ನಡುವೆ ಸುಮಧುರ ಸಂಬಂಧಗಳನ್ನು ಕಟ್ಟುವ ಕೆಲಸವಾಗಬೇಕಿದೆ. ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಕಾರ್ಯಕರ್ತರು ಸದ್ದಿಲ್ಲದೆ ಸರಳ ಜೀವನದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಿರುವುದು ಶ್ಲಾಘನೀಯ ಎಂದರು.

ಹುಣಸೂರು ಶಾಖೆಯ ಸಂಚಾಲಕಿ ನಾಗಶ್ರೀ ಜೀ, ನಗರಸಭಾಧ್ಯಕ್ಷ ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಪೌರಾಯುಕ್ತೆ ಮಾನಸ, ಗುತ್ತಿಗೆದಾರ ಗೋವಿಂದೇಗೌಡ, ಸಿರಾಜ್, ಶ್ರೀನಿವಾಸ್, ರಾಮಚಂದ್ರ, ಮಹೇಶ್, ಬಾಬು, ವೀರಂಭಾಯ್, ಮಳೆಬೆನ್ನೂರು ರುದ್ರೇಶ್, ಮೂರ್ತಿಜೀ, ಕೃಷ್ಣಮೂರ್ತಿ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net