

ಕುಣಿಗಲ್ : ಮೂರು ವರ್ಷದ ಒಳಗೆ ತಾಲೂಕಿನ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡುವ ಮೂಲಕ ಮಣ್ಣಿನ ರಸ್ತೆ ಮುಕ್ತ ಮಾಡಲಾಗುವುದು ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ತಿಳಿಸಿದರು.
ತಾಲೂಕಿನ ಎಡಿಯೂರು ಹೋಬಳಿ ಬಸವನಗುಡಿ ತಿಟ್ಟಿನಿಂದ ಬಸವನಮತ್ತಿಕೆರೆಗೆ ಸುಮಾರು 6 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಾಲೂಕಿನ ಜನರ ಆಶೋತ್ತರಗಳಿಗೆ ಸ್ಪಂದಿಸಿ ಹಂತ ಹಂತವಾಗಿ ಅಭಿವದ್ಧಿ ಕಾಮಗಾರಿ ಕೆಗೆತ್ತಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ 150 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮತ್ತು ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಒಂದು ವರ್ಷದಲ್ಲಿ ಉಳಿದಿರುವ ತಾಲೂಕಿನ ಮುಖ್ಯರಸ್ತೆಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣಗೊಳಿಸುವುದಾಗಿ ತಿಳಿಸಿದರು.
ಹುರುಳಿಬೋರಸಂದ್ರ, ಗೌಡಗೆರೆ ಕೊಡಗಿಹಳ್ಳಿ ಮಾರ್ಗ ಅಮೃತ್ತೂರು ಸಂಪರ್ಕಿಸುವ ರಸ್ತೆ ಹಾಳಾಗಿದೆ, ಗೌಡಗೆರೆ ಭಾಗದ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ 3 ಕಿ.ಮೀ ರಸ್ತೆ ಕಾಮಗಾರಿಯನ್ನು 6 ಕೋಟಿ ರೂ ವೆಚ್ಚದ ಕೆಗೆತ್ತಿಕೊಳ್ಳಲಾಗಿದೆ ಎಂದರು.
ಗ್ರಾಮದಲ್ಲಿ ಸಮುದಾಯ ಭವನ ಇಲ್ಲ. ಮದುವೆ ಮತ್ತು ಶುಭ ಕಾರ್ಯಗಳು ನಡೆದರೆ ಗ್ರಾಮಸ್ಥರು ಬೀದಿಯಲ್ಲಿ ಕುಳಿತುಕೊಂಡು ಊಟ ಮಾಡುವ ಪರಿಸ್ಥಿತಿ ಬಂದಿದೆ. ಹಾಗಾಗಿ ಒಂದು ಸಮುದಾಯ ಭವನವನ್ನು ಕಟ್ಟಿಸಿಕೊಡುವಂತೆ ಮಹಿಳೆಯರು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ನಿಮ್ಮ ಬೇಡಿಕೆಯನ್ನು ಈಡೇರಿಸಲು ಕ್ರಮಕೆಗೊಳ್ಳಲಾಗುವುದು ಎಂದರು.
ಗ್ಯಾರಂಟಿ ಯೋಜನೆಯಾದ ಗಹಲಕ್ಷಿ$್ಮ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಸದ್ಬಳಕ್ಕೆ ಮಾಡಿಕೊಳ್ಳುವಂತೆ ಇದೇ ವೇಳೆ ನೆರೆದಿದ್ದ ಗ್ರಾಮಸ್ಥರಿಗೆ ತಿಳಿಸಿದರು.