2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ

ಎಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ 24 ಮನೆ ತೆಲುಗು ಶೆಟ್ಟರ ಜನಾಂಗದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಘಟಕದ ನೂತನ ಸಂಘವನ್ನು ಶಾಸಕ ಅನಿಲ್ ಚಿಕ್ಕಮಾದು ಹಾಗೂ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು.
ಎಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ 24 ಮನೆ ತೆಲುಗು ಶೆಟ್ಟರ ಜನಾಂಗದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಘಟಕದ ನೂತನ ಸಂಘವನ್ನು ಶಾಸಕ ಅನಿಲ್ ಚಿಕ್ಕಮಾದು ಹಾಗೂ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು.
Published on

ಎಚ್.ಡಿ.ಕೋಟೆ: ತಾಲೂಕಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ತೆಲುಗು ಶೆಟ್ಟರ ಜನಾಂಗದ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ತಾಲೂಕು 24 ಮನೆ ತೆಲುಗು ಶೆಟ್ಟರ ಜನಾಂಗದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಘಟಕದ ನೂತನ ಸಂಘದ ಉದ್ಘಾಟನೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಚ್.ಡಿ.ಕೋಟೆ ಪಟ್ಟಣದಲ್ಲಿ ಸಮುದಾಯ ಭವನ ಕಟ್ಟಲು ನಿವೇಶನ ನೀಡಲಾಗಿತ್ತು. ಆದರೆ ಸಮುದಾಯದವರು ಜಾಗ ಸಾಲುವುದಿಲ್ಲ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅರ್ಧ ಎಕರೆ ಜಾಗ ಗುರುತು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾಗ ಗುರುತಿಸಿದ ತಕ್ಷಣ ಸರ್ಕಾರದ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣ ಮಾಡಿಕೊಡಲಾಗುತ್ತದೆ. ಶಾಸಕರ ಅನುದಾನದಲ್ಲಿ ನಾನು 25 ಲಕ್ಷ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.

ತೆಲುಗು ಶೆಟ್ಟರ ಜನಾಂಗಕ್ಕೆ ಒಂದು ಇತಿಹಾಸ ಇದೆ. ತಾಲೂಕಿನಲ್ಲಿ ನಮ್ಮ ಜನಾಂಗ ಇದೇ ಎಂಬುದನ್ನು ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ತೋರಿಸಿಕೊಟ್ಟಿದ್ದೀರಿ. ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಮೇಲೆ ಬರಬೇಕು. ರಾಜ್ಯದಲ್ಲಿ ನಮ್ಮ ಸಮುದಾಯದ ಜನಪ್ರತಿನಿಧಿಗಳು ಇಲ್ಲವೆಂಬ ಕೊರಗು ಬೇಡ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಿಮ್ಮ ಜತೆ ಇದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ತೆಲುಗು ಶೆಟ್ಟರ ಸಮುದಾಯ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಸಂಘಟಿತರಾಗಿ ಸರ್ಕಾರದ ಸವಲತ್ತುಗಳು ದೊರಕಿಸಿಕೊಳ್ಳಬೇಕು. ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಂಗಸ್ವಾಮಿ ಶೆಟ್ಟಿ, ತೆಲುಗು ಶೆಟ್ಟರ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಸಂಕಷ್ಟದ ಬದುಕು ದೂಡುತ್ತಿರುವ ಸಮುದಾಯ ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ವಿಫಲವಾಗಿದೆ ಎಂದರು.
ತಾಲೂಕಿನಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಂಘಟಿತರಾಗಿ ಜಾಗೃತಿ ಮೂಡಬೇಕಿದೆ. ಹೋರಾಟ ಮಾಡದೆ ಇದ್ದರೆ ಯಾವುದೇ ಸವಲತ್ತುಗಳು ಸಿಗುವುದಿಲ್ಲ. ಹಾಗಾಗಿ ಸಂಘಟಿತರಾಗಲೇಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು 24 ಮನೆ ತೆಲುಗು ಶೆಟ್ಟರ ಜನಾಂಗದ ಕುಲಗುರು ಟಿ.ವೀರಭದ್ರಯ್ಯ ವಹಿಸಿ ಆಶೀರ್ವಾಚನ ನೀಡಿದರು. ಸಂಘದ ತಾಲೂಕು ಅಧ್ಯಕ್ಷ ಎನ್.ಎಸ್.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಿಂದ ಅಲಂಕೃತ ಬೆಳ್ಳಿ ರಥದಲ್ಲಿ ಶ್ರೀ ಅಂಕಾಳಮ್ಮ ಪರಮೇಶ್ವರಿ ಭಾವಚಿತ್ರ ಹಾಗೂ ಜನಾಂಗದ ಕುಲಗುರುಗಳನ್ನು ಒಳಗೊಂಡ ಮೆರವಣಿಗೆ, ಕೇರಳದ ಚೆಂಡೆ, ವೀರಗಾಸೆ, ನಾದಸ್ವರದೊಂದಿಗೆ ಪ್ರಮುಖ ರಸ್ತೆಯಲ್ಲಿ ಸಾಗಿ ವೇದಿಕೆಯಲ್ಲಿ ಸಮಾವೇಶಗೊಂಡಿತು. ಮಹಿಳೆಯರು ಕಳಸ ಹೊತ್ತು ಸಾಗಿ ಮೆರವಣಿಗೆ ಕಳೆಗಟ್ಟುವಂತೆ ಮಾಡಿದರು.

ಕಾರ್ಯಕ್ರಮದಲ್ಲಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ, ಗುಂಡ್ಲಪೇಟೆ ಶಾಸಕ ಗಣೇಶ್ ಪ್ರಸಾದ್, 24 ಮನೆ ತೆಲುಗು ಶೆಟ್ಟರ ಜನಾಂಗದ ರಾಜ್ಯ ಅಧ್ಯಕ್ಷ ವಿ.ಮಂಜುನಾಥ್, ಬಂಗಾರಶೆಟ್ಟಿ, ಇಂದ್ರಶೆಟ್ಟಿ, ಕಳಲೆ ಮಹಾದೇವು, ಬಿ.ಆರ್.ಸಿ ರಂಗಸ್ವಾಮಿ ಶೆಟ್ಟಿ, ರತ್ನಮಾಲ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮೃತ್ಯುಂಜಯ, ಪ್ರಭಾಕರ್, ಭಾಗ್ಯಮ್ಮ ಕೃಷ್ಣಶೆಟ್ಟಿ, ನಂಜಪ್ಪ ಶೆಟ್ಟಿ, ಶಿವಪ್ಪ ಶೆಟ್ಟಿ, ಎಚ್.ಎನ್.ಕೃಷ್ಣಶೆಟ್ಟಿ, ಶಿವನಾಗಶೆಟ್ಟಿ, ಶೇಖರ್, ಮೃತ್ಯುಂಜಯ, ಭಾಸ್ಕರ್ ಶೆಟ್ಟಿ, ವೀರಭದ್ರ ಶೆಟ್ಟಿ, ಮಹಾದೇವಶೆಟ್ಟಿ, ಆರ್.ರವಿ, ಮುರುಳಿಕೃಷ್ಣ, ಬಸವರಾಜು, ಗಣೇಶ್, ಮಂಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟಸ್ವಾಮಿ, ರವಿ, ಚಿಕ್ಕವೀರನಾಯಕ, ಪುರಸಭೆ ಸದಸ್ಯರಾದ ಎಚ್.ಸಿ.ನರಸಿಂಹ ಮೂರ್ತಿ, ಆಸೀಫ್, ಮಧು, ಪ್ರೇಮ್, ಮಳಲಿ ಶಾಂತ, ಜವರಯ್ಯ, ಹೈರಿಗೆ ಶಿವರಾಜು, ಸುರೇಂದ್ರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net