

ಕಡಬ: ಸಾರ್ವಜನಿಕರ ಉಪಯೋಗಕ್ಕೆ ಐತ್ತೂರು ಗ್ರಾಮದ ಮುಂಡಡ್ಕ ಓಟೆಕಜೆ ಹಾಗೂ ಕೊಂಬಾರು ಗ್ರಾಮದ ಕಟ್ಟೆ ಎಂಬಲ್ಲಿ ಸರ್ವಋತು ಸೇತುವೆ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಉಪಸಭಾಧ್ಯಕ್ಷ, ವಿಧಾನಸಭೆ ದೂರು ಅರ್ಜಿಗಳ ಸಮಿತಿ ಸದಸ್ಯರಾಗಿರುವ ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ಐತ್ತೂರು ಗ್ರಾಮದ ಮುಂಡಡ್ಕ ಓಟಕಜೆ ಹಾಗೂ ಕೊಂಬಾರು ಗ್ರಾಮದ ಕಟ್ಟೆ ಎಂಬಲ್ಲಿ ಸರ್ವಋತು ಸೇತುವೆ ನಿರ್ಮಾಣ ಬೇಡಿಕೆಯ ವಿಷಯ ದೂರು ಅರ್ಜಿಗಳ ಸಮಿತಿಯ ಎದುರು ಚರ್ಚೆಗೆ ಬಂದಿತ್ತು.
ಕೊಂಬಾರಿನ ಕಟ್ಟೆ ಸೇರಿದಂತೆ ಇತರೆಡೆಯೂ ಇದೇ ರೀತಿಯ ಸಮಸ್ಯೆ ಇರುವುದನ್ನು ಗಮನಿಸಿದ್ದ ಸುರೇಶ್ ಕುಮಾರ್ ಜುಲೈ 9ರಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಲೋಕೇಶ್, ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ತಂಡದ ಮುಖ್ಯಸ್ಥ ಮೊಯಿದ್ದೀನ್ ಕುಟ್ಟಿ, ಪ್ರಮುಖರಾದ ವಿನೇಶ್ ಬಿಳಿನೆಲೆ, ರಾಮಕೃಷ್ಣ ಹೊಳ್ಳಾರು ಮತ್ತಿತರರ ಜತೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದರು.
ಕಡಬ ತಾಲೂಕಿನ ಐತ್ತೂರು ಗ್ರಾಮದ ಮುಂಡಡ್ಕ ಓಟೆಕಜೆ ಪ್ರದೇಶದಲ್ಲಿ ನೆಟ್ಟಣ ಹೊಳೆಗೆ 60 ಲಕ್ಷ ರೂ. ವೆಚ್ಚ ಹಾಗೂ ಕೊಂಬಾರು ಗ್ರಾಮದ ಅಲ್ವೆಕಟ್ಟೆ ಹೊಳೆಗೆ ಬಿರ್ಮೆರೆಗುಂಡಿ ಎಂಬಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಅನುದಾನ ಲಭಿಸಿದೆ. ಅಗತ್ಯ ಪ್ರಕ್ರಿಯೆಗಳು ನಡೆದು ಲೋಕೋಪಯೋಗಿ ಇಲಾಖೆಯ ಮೂಲಕ ಶೀಘ್ರ ಸೇಡುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ ವಿಧಾನ ಸಭಾ ಕ್ಷೇತ್ರ
ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ ವಿಧಾನ ಸಭಾ ಕ್ಷೇತ್ರ