ಹರೇಕಳ ಗ್ರಾಮಕ್ಕೆ ಅತ್ಯಧಿಕ ಅನುದಾನದ ಕೊಡುಗೆ : ಮುಸ್ತಫಾ ಹರೇಕಳ ಹೇಳಿಕೆ

New Project (29)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಹೊಸ ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯೊಂದಿಗೆ ಎರಡೂವರೆ ವರ್ಷಗಳಲ್ಲಿ ಇತರ ಗ್ರಾಮಗಳಿಗಿಂತಲೂ ಸ್ಪೀಕರ್ ಯು.ಟಿ.ಖಾದರ್ ಹರೇಕಳ ಗ್ರಾಮಕ್ಕೆ ಅತ್ಯಧಿಕ ಅನುದಾನ ಒದಗಿಸಿದ್ದಾರೆ. ನಿವೇಶನರಹಿತರಿಗೆ ನೀಡಲು ಮೀಸಲಾದ ಜಮೀನಿನಲ್ಲಿ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಹರೇಕಳ ಹೇಳಿದರು.

ಖಾದರ್ ಅನುದಾನದಲ್ಲಿ ಭಾನುವಾರ ಹರೇಕಳ ಗ್ರಾಮದ ಆಲಡ್ಕ ಅನ್ಸಾರುಲ್ ಮಸಾಕೀನ್ ದಫ್ ಕಮಿಟಿ ಕಚೇರಿ ಬಳಿ ತಡೆಗೋಡೆ ಹಾಗೂ ನೂತನ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಮಾತನಾಡಿ, ಮೂರೂವರೆ ಕೋಟಿ ಯೋಜನೆಯಿಂದ ಕಡವಿನ ಬಳಿ ಪಾರ್ಕ್ ಹಾಗೂ 40 ಕೋಟಿ ಅನುದಾನದಲ್ಲಿ ಸಜಿಪದವರೆಗೆ ನದಿ ಬದಿ ರಸ್ತೆ ನಿರ್ಮಾಣ ಮೂಲಕ ದೂರದೃಷ್ಟಿಯ ಯೋಜನೆ ರೂಪಿಸಿದ್ದಾರೆ ಎಂದರು.

ಗ್ರಾಪಂ ಉಪಾಧ್ಯಕ್ಷ ಮಜೀದ್ ಎಂ.ಪಿ., ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಉಂಬುದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಉಮರಬ್ಬ ಶಿಲಾನ್ಯಾಸಗೈದರು. ಗ್ರಾಪಂ ಸದಸ್ಯರಾದ ಸತ್ತಾರ್ ಬಾವಲಿಗುರಿ, ಅಬೂಬಕ್ಕರ್ ಸಿದ್ದೀಕ್, ಮಹಮ್ಮದ್ ರಫೀಕ್, ಪ್ರಮುಖರಾದ ಅಣ್ಣಿ ಪೂಜಾರಿ, ರಫೀಕ್, ಲತೀಫ್ ಆಲಡ್ಕ, ಅಹಮ್ಮದ್, ಸತ್ತಾರ್, ಜಲೀಲ್, ಲತೀಫ್, ಖಾದರ್, ರಝಾಕ್, ಸಫ್ವಾನ್, ಇಬ್ರಾಹಿಂ, ಬದ್ರುದ್ದೀನ್, ಮುನೀರ್, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

ಹಿಂದೆ ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನಕ್ಕೆ ಅನುಗುಣವಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಸ್ಪೀಕರ್ ಅವರ ಅನುದಾನದಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ನಡೆಯಲಿದೆ. ಆಲಡ್ಕ ಪ್ರದೇಶದಲ್ಲಿ ಸಾಕಷ್ಟು ಅನುದಾನ ಸ್ಪೀಕರ್ ನೀಡಿದ್ದಾರೆ. ಮಜೀದ್ ಎಂ.ಪಿ. ಗ್ರಾಪಂ ಉಪಾಧ್ಯಕ್ಷ https://www.vijayavani.net/cleanliness-hi-seva-special-campaign-by-konkan-railway-2 https://www.vijayavani.net/kalpataru-foundation-inaugurated-at-vajradehi-math

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net