39.8 ಎಕರೆಯಲ್ಲಿ ನಿವೇಶನ, ಅಪಾರ್ಟ್‌ಮೆಂಟ್, ವಿಲ್ಲಾ ನಿರ್ಮಾಣ

Published on

ಮೈಸೂರು: ರಿಯಲ್ ಎಸ್ಟೇಟ್‌ನಲ್ಲಿ ಹೆಸರು ಮಾಡಿರುವ ಜಿ-ಸ್ಕ್ವೇಯರ್ ಆಲ್ಕೆಮಿ ನಗರದಲ್ಲಿ ಸುಸಜ್ಜಿತ ಟೌನ್‌ಶಿಫ್ ನಿರ್ಮಾಣಕ್ಕೆ ಮುಂದಾಗಿದೆ.

ದಟ್ಟಗಳ್ಳಿಯ ಶ್ರೀರಾಜರಾಜೇಶ್ವರಿ ಬಡಾವಣೆಯ ಕ್ರೈಸ್ಟ್ ಪಬ್ಲಿಕ್ ಶಾಲೆ ಬಳಿ 39.8 ಎಕರೆ ವಿಸ್ತೀರ್ಣದಲ್ಲಿ ನಾನಾ ಅಳತೆಯ ನಿವೇಶನಗಳು, ಅಪಾರ್ಟ್‌ಮೆಂಟ್, ವಿಲ್ಲಾಗಳನ್ನು ನಿರ್ಮಿಸಲಾಗುವುದು ಎಂದು ಸಂಸ್ಥೆಯ ಮಾರಾಟ ವಿಭಾಗದ ಕಂಟ್ರಿ ಮುಖ್ಯಸ್ಥ ಶಿವಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವದರ್ಜೆಯ ಗುಣಮಟ್ಟದ ಸೌಲಭ್ಯಗಳನ್ನು ಬಡಾವಣೆ ಹೊಂದಿದ್ದು, ಆರಂಭಿಕ 50 ಜನರಿಗೆ ಚದರ ಅಡಿಗೆ 4551ರೂ. ದರದಲ್ಲಿ ನಿವೇಶನ ನೀಡಲಾಗುವುದು. ಅಲ್ಲದೇ ಸಂಸ್ಥೆಯಿಂದಲೇ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅಗತ್ಯವಾದ ವಿನ್ಯಾಸದ ಗುಣಮಟ್ಟದ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ಗ್ರಾಹಕ ಸ್ನೇಹಿಯಾಗಿ ಸಂಸ್ಥೆ ಬದ್ಧತೆ ಇಟ್ಟುಕೊಂಡಿದ್ದು, ನಿವೇಶನ ಕೊಳ್ಳಬಯಸುವರು ಅಗತ್ಯ ದಾಖಲೆಗಳನ್ನು ಪಡೆದು ತಮ್ಮ ಕಾನೂನು ತಜ್ಞರೊಂದಿಗೆ ಚರ್ಚಿಸಿ ಬಳಿಕ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಹಂತದಲ್ಲಿಯೂ ಪಾರದರ್ಶಕತೆ, ಸರ್ಕಾರ ಹಾಗೂ ರೇರಾ ನಿಯಮ ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಗ್ರಾಹಕರ ವಿಶ್ವಾಸಗಳಿಸಲಾಗಿದೆ ಎಂದು ಹೇಳಿದರು.

2012ರಲ್ಲಿ ಆರಂಭಗೊಂಡ ಸಂಸ್ಥೆ 13ನೇ ವರ್ಷಕ್ಕೆ ಕಾಲಿಟ್ಟಿದ್ದು, 15 ಸಾವಿರಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ದಕ್ಷಿಣ ಭಾರತದ 14 ನಗರಗಳಲ್ಲಿ ನಾಲ್ಕು ಸಾವಿರ ಎಕರೆಯಷ್ಟು ಭೂಮಿ ಅಭಿವೃದ್ಧಿಪಡಿಸುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ ಎಂದು ವಿವರಿಸಿದರು.

ಸಂಸ್ಥೆಯ ಕರ್ನಾಟಕ ಮಾರುಕಟ್ಟೆ ವಿಭಾಗದ ಅಸೋಸಿಯೇಟ್ ಉಪಾಧ್ಯಕ್ಷ ಜಗದೀಶ್, ಸಿಬ್ಬಂದಿ ಸೈಯದ್, ಕಾಶಿ, ನವೀನ್‌ಕುಮಾರ್, ಮಹದೇವ್, ಪವನ್, ಪಂಕಿತ್ ಗೊರಾವರ್, ಶ್ಯಾರನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net