ಸವಣೂರು ರೈಲು ಟ್ರ್ಯಾಕ್ ಬಳಿ ಹೊಂಡ ನಿರ್ಮಾಣ

New Project (4)
Published on

ಕಡಬ: ಸವಣೂರು- ಬೆಳ್ಳಾರೆ ರಾಜ್ಯ ಹೆದ್ದಾರಿಯ ಸವಣೂರು ಪೇಟೆ ಸಮೀಪದ ರೈಲು ಟ್ರ್ಯಾಕ್ ದಾಟಿ ಹೋಗುವ ರಸ್ತೆ ಭಾಗದಲ್ಲಿ ಬೃಹತ್ ಹೊಂಡ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ದಿನ ನಿತ್ಯ ನೂರಾರು ವಾಹನ ಸಂಚರಿಸುತ್ತವೆ. ರಸ್ತೆಯನ್ನು ಇತ್ತೀಚೆಗೆ ಡಾಂಬರು ಅಳವಡಿಸಲಾಗಿತ್ತು. ಡಾಂಬರು ಅಳವಡಿಸಿದ ಮರುದಿನವೇ ಧಾರಾಕಾರ ಮಳೆಯಾಗಿದೆ. ಹೀಗಾಗಿ ಹಾಕಲಾದ ಡಾಂಬರು ಕಿತ್ತುಕೊಂಡು ಹೋಗಿ ರಸ್ತೆಯಲ್ಲಿ ಹೊಂಡ ಉಳಿದಿದೆ. ಪ್ರಸ್ತುತ ಮಳೆಗಾಲದಲ್ಲಿ ಹೊಂಡದಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಹೊಂಡದಲ್ಲಿ ನೀರು ತುಂಬಿ ರೈಲು ಟ್ರ್ಯಾಕ್ ಬಳಿ ಕೃತಕ ಕೆರೆ ಸೃಷ್ಟಿಯಾಗುತ್ತಿದೆ. ಗುಂಡಿಯನ್ನು ಮುಚ್ಚದಿದ್ದರೆ ಸ್ಥಳೀಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net