ಸರ್ಕಾರದ ನೆರವಿಲ್ಲದೆ ಉದ್ಯಾನ ನಿರ್ಮಾಣ

Ank park
Published on

ಅಂಕೋಲಾ: ಮನುಷ್ಯ ಸ್ವಾರ್ಥಕ್ಕಾಗಿ ಪರಿಸರ ಅರಣ್ಯವನ್ನು ನಾಶ ಮಾಡುತ್ತಿದ್ದಾನೆ. ಪರಿಸರ ನಾಶದಿಂದ ಸಾಕಷ್ಟು ಜೀವರಾಶಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಿ ಪರಿಸರ ಉಳಿಸಿಕೊಳ್ಳುವತ್ತ ಗಮನ ನೀಡಬೇಕಾಗಿದೆ ಎಂದು ವಿ.ಪ. ಸದಸ್ಯ ಎಸ್.ವಿ. ಸಂಕನೂರು ಹೇಳಿದರು.

ಪಟ್ಟಣದ ಕೇಣಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಿರುವ ಚಿಗುರು ಉದ್ಯಾನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಅನುದಾನ ಪಡೆಯದೇ ಚಿಗುರು ಉದ್ಯಾನ ನಿರ್ಮಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಉದ್ಯಾ ನದಲ್ಲಿ ಬಿಡಿಸಿರುವ ಚಿತ್ರಗಳು ಅರ್ಥಗರ್ಭಿತವಾಗಿವೆ. ಇದು ಕೇವಲ ಉದ್ಯಾನವಾಗದೆ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಮೂಲಕ ಪ್ರಕೃತಿ ಸೌಂದರ್ಯ ಸವಿಯುತ್ತ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಶ್ರೀಕಾಂತ ದುರ್ಗೇಕರ ಮಾತನಾಡಿ, ಶಿಕ್ಷಕ ಸುಧೀರ ನಾಯಕ ಅವರು ಚಿಗುರು ಉದ್ಯಾನ ನಿರ್ಮಿಸಿ ನಮ್ಮ ಊರಿನ ಹೆಮ್ಮೆ ಹೆಚ್ಚಿಸಿದ್ದಾರೆ ಎಂದರು.

ಭಾವಿಕೇರಿ ಗ್ರಾಪಂ ಅಧ್ಯಕ್ಷೆ ದೀಪಾ ನಾಯಕ, ಸುಧೀರ ನಾಯಕ ಮಾತನಾಡಿದರು.

ಬಿಇಒ ಮಂಗಳಲಕ್ಷ್ಮೀ ಪಾಟೀಲ, ಪ್ರಮುಖರಾದ ಉದಯ ನಾಯಕ, ನಾಗಾನಂದ ಬಂಟ, ವಿ.ಎಂ. ನಾಯಕ, ಡಾ. ಗಜಾನನ ನಾಯಕ, ದಿನೇಶ ನಾಯ್ಕ, ಗಜಾನನ ನಾಯ್ಕ ಕೇಣಿ ಇತರರು ಉಪಸ್ಥಿತರಿದ್ದರು. ಜನ್ಮಿತಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಹರ್ಷಿತಾ ನಾಯಕ ಸ್ವಾಗತಿಸಿದರು. ರಾಜೇಶ ನಾಯಕ ಸೂರ್ವೆ ಮತ್ತು ನೂತನ ಡಿ. ನಾಯಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net