ಮಾಲೂರಿನಲ್ಲಿ ನೂತನ ಆಸ್ಪತ್ರೆ ನಿರ್ಮಾಣ

111
ಶ್ರೀನಿವಾಸಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಶುಶ್ರೂಷಕರೊಂದಿಗೆ ಸಮಾಲೋಚನೆ ನಡೆಸಿದರು. ಶಾಸಕ ಕೆ.ವೈ. ನಂಜೇಗೌಡ ಇದ್ದರು. ತಹಸೀಲ್ದಾರ್​ ರಮೇಶ್​, ತಾಲೂಕು ಪಂಚಾಯಿತಿ ಇಒ ಕೃಷ್ಣಪ್ಪ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್​, ಪುರಸಭಾ ಅಧ್ಯ ಆರ್​. ಕೋಮಲಾ, ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯ ಮಹದ್ಮದ್​ ನಯೀಮ್​ವುಲ್ಲಾ, ಜಿಲ್ಲಾ ಕಾಂಗ್ರೆಸ್​ ಸಮಿತಿಯ ಅಧ್ಯ ಸಿ.ಲ್ಮನಾರಾಯಣ,
Published on

ಮಾಲೂರು: ಪಟ್ಟಣದಲ್ಲಿ ನೂತನ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮುಂಬರುವ ಬಜೆಟ್​ನಲ್ಲಿ ಆಸ್ಪತ್ರೆ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್​ಗುಂಡೂರಾವ್​ ಭರವಸೆ ನೀಡಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಶಿಥಿಲಗೊಂಡಿರುವ ಆಸ್ಪತ್ರೆಯ ಕಟ್ಟಡ ವೀಸಿ ಮಾತನಾಡಿ, ತಾಲೂಕುಮಟ್ಟದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಆಸ್ಪತ್ರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಆದ್ದರಿಂದ ಮಾಲೂರಿನ ಸರ್ಕಾರಿ ಆಸ್ಪತ್ರೆಯು ತುಂಬಾ ಹಳೆಯದಾಗಿರುವುದರಿಂದ ಶಿಥಿಲಾವಸ್ಥ್ಥೆಯಲ್ಲಿದೆ. ಆದ್ದರಿಂದ ಜನತೆಗೆ ಬೇಕಾಗುವ ಸೌಲಭ್ಯಗಳನ್ನು, ಆಸ್ಪತ್ರೆಗೆ ಒದಗಿಸಲು ಸಾಧ್ಯವಿಲ್ಲ. ಮೊದಲು ಹೊಸ ಕಟ್ಟಡ ನಿರ್ಮಿಸಿ ಆಸ್ಪತ್ರೆಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ವಿಶೇಷವಾಗಿ ಹೆಚ್ಚುವರಿ ವೈದ್ಯರ ನೇಮಕ ಮಾಡಲಾಗುವುದು. ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಬಡಜನರು ಸರ್ಕಾರಿ ಆಸ್ಪತ್ರೆ ಮೇಲೆ ನಂಬಿಕೆ ಇಟ್ಟು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಆರೋಗ್ಯ ಚಿಕಿತ್ಸೆ ನೀಡಿ ಸರ್ಕಾರ ಆಸ್ಪತ್ರೆ ಮೇಲಿರುವ ನಂಬಿಕೆ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತಕ್ಕೆ ಬಂದ ನಂತರ ಇತಿಹಾಸದಲ್ಲಿ ಮಾಲೂರಿನ ಅಭಿವೃದ್ಧಿಗೆ ಎಂದೂ ತರದ ಅನುದಾನಗಳಾದ 2,200 ಕೋಟಿ ರೂ. ಅನುದಾನ ತರಲಾಗಿದೆ. ಮಾಲೂರಿನ ಅಭಿವೃದ್ಧಿಗಾಗಿ ದೊಡ್ಡ ಕೆರೆಯ ಅಭಿವೃದ್ಧಿ, ಬಸ್​ ನಿಲ್ದಾಣ ಅಭಿವೃದ್ಧಿ, ಬೆಂಗಳೂರು ರಸ್ತೆಯ ಎಪಿಎಂಸಿ ಯಾರ್ಡ್​ನಿಂದ ಹೊಸೂರು ರಸ್ತೆಯವರೆಗೆ ್ಲೆ$ಓವರ್​ ನಿರ್ಮಾಣ ಹಾಗೂ ನಾಲ್ಕು ಪಥ ರಸ್ತೆ ನಿರ್ಮಾಣ, ಬಸ್​ ನಿಲ್ದಾಣ ಮೇಲ್ದರ್ಜೆಗೇರಿಸಲು ಯತ್ನಿಸುವ ಭರವಸೆ ನೀಡಿದರು.

ಬ್ಲಾಕ್​ ಕಾಂಗ್ರೆಸ್​ ಸಮಿತಿಯ ಅಧ್ಯರಾದ ವಿಜಯನರಸಿಂಹ, ಮಧುಸೂದನ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ಕೆ.ಎಚ್​.ಚನ್ನರಾಯಪ್ಪ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯ ಎ.ರಾಜಪ್ಪ, ಪುರಸಭಾ ಮುಖ್ಯಾಧಿಕಾರಿ ಪ್ರದಿಪ್​ಕುಮಾರ್​ ಇತರರು ಇದ್ದರು.

10 ಎಕರೆ ಜಮೀನು ಮೀಸಲು: ಹೊಸ ಆಸ್ಪತ್ರೆಗೆ ಬೇಕಾಗುವ 10ಎಕರೆ ಸರ್ಕಾರಿ ಜಮೀನನ್ನು ಈಗಾಗಲೇ ತಹಸಿಲ್ದಾರ್​ ಅವರು ಸಹಕಾರದಿಂದ ಗುರುತಿಸಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ವರದಿ ಸಲ್ಲಿಸಲಾಗಿದೆ. ಆದ್ದರಿಂದ ಆರೋಗ್ಯ ಸಚಿವರು ಮುಂದಿನ ಬಜೆಟ್​ಗೆ ಒಂದು ತಿಂಗಳ ಮುಂಚಿತವಾಗಿ 10 ಎಕರೆ ಜಮೀನು ಮಂಜೂರು ಮಾಡಿ ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಶಾಸಕ ನಂಜೇಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net