

ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆಗೆ ಜಿಲ್ಲಾಧಿಕಾರಿ ಎಸ್.ಕವಿತಾ ಅವರು ಶನಿವಾರ ದಿಢೀರ್ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಮರಿರಾಮಪ್ಪ, ಪುರಸಭೆ ಕಟ್ಟಡವನ್ನು ಆರಂಭಿಸಬೇಕು ಹಾಗೂ ಪಟ್ಟಣದ ರಸ್ತೆಗಳೆಲ್ಲ ದುರಸ್ತಿಗೆ ಬಂದಿವೆ ಎಂದು ಹೇಳಿದರು. ಶೀಘ್ರವೇ ಕಟ್ಟಡ ಆರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಡಿಸಿ, ಅನುದಾನಗಳಲ್ಲಿ ಸಣ್ಣಪುಟ್ಟ ರಸ್ತೆಗಳ ದುರಸ್ತಿ ಕೈಗೊಳ್ಳಿ ಎಂದರು. ಸದಸ್ಯರಾದ ದೀಪಕ್‌ಸಾ ಕಠಾರೆ, ಜನ್ನು ನಾಗರಾಜ, ಜೋಗಿ ಹನುಮಂತಪ್ಪ, ಪ್ರಮುಖರಾದ ಸಿಕಂದರ್, ಮುಖ್ಯಾಧಿಕಾರಿ ಎಂ.ಕೆ.ಮುಗುಳಿ ಇದ್ದರು.