ಗುಬ್ಬಿಯಲ್ಲಿ ಸಾಂಸತಿಕ ಭವನ ನಿರ್ಮಾಣ

FotoJet
Published on

 ಗುಬ್ಬಿ : ಪಟ್ಟಣದ ಶ್ರೀ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘದಿಂದ ನೂತನ ಸಾಂಸತಿಕ ಭವನ ಕಟ್ಟಡ ನಿಮಾರ್ಣಕ್ಕೆ ಭೂಮಿ ಪೂಜೆಯನ್ನು ಶಾಸಕ ಎಸ್​.ಆರ್​.ಶ್ರೀನಿವಾಸ್​ ನೆರವೇರಿಸಿದರು.

ಸಂಘದ ಅಧ್ಯಕ್ಷ ಉಂಡೆ ರಾಮಣ್ಣ ಮಾತನಾಡಿ, ನಮ್ಮ ಸಮುದಾಯದಿಂದ ಮುಂದಿನ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾಂಸತಿಕವಾಗಿ ಅನುಕೂಲವಾಗುವಂತೆ ಸಾಂಸತಿಕ ಭವನವನ್ನು ನಿರ್ಮಾಣ ಮಾಡುತ್ತಿದ್ದು, ಈ ಮೂಲಕ ಮಕ್ಕಳ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿದಂತೆ ವಿಶೇಷ ತರಗತಿಗಳು ಹಾಗೂ ನಮ್ಮ ಸಂಸತಿ ಸಂಸ್ಕಾರಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಎಸ್​.ಆರ್​.ಶ್ರೀನಿವಾಸ್​ ಸೇರಿದಂತೆ ಇನ್ನಿತರ ಸಹಕಾರದಿಂದ ಈ ಭಾಗದಲ್ಲಿ ಸುಂದರ ಕಟ್ಟಡ ನಿಮಾರ್ಣವಾಗುತ್ತದೆ ಎಂದರು.

ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ನಂಜೇಗೌಡ ಮಾತನಾಡಿ, ಈಗಾಗಲೇ ವಿಶೇಷ ಕಲ್ಯಾಣ ಮಂಟಪವನ್ನು ಸಮುದಾಯದಿಂದ ನಿಮಾರ್ಣ ಮಾಡುತ್ತಿದ್ದು, ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಶಿಕ್ಷಣಕ್ಕೆ ಸಂಬಂಧಪಟ್ಟ ಕೆಲಸ ಮಾಡಲಾಗುತ್ತಿದೆ. ಮುಂದೆ ಸಾಂಸತಿಕ ಭವನ ನಿಮಾರ್ಣದಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪಪಂ ಸದಸ್ಯ ಕುಮಾರ್​, ಉಪಾಧ್ಯಕ್ಷ ಎನ್​.ಸಿ.ಶಿವಣ್ಣ, ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಖಜಾಂಚಿ ಸಣ್ಣ ರಂಗಯ್ಯ, ಜಂಟಿ ಕಾರ್ಯದರ್ಶಿ ಜಿ.ಟಿ.ನಾಗರಾಜು, ನಿರ್ದೇಶಕರಾದ ಬಲರಾಮಯ್ಯ,ಬಿ.ಸಿ.ಲೋಕೇಶ್​, ಡಿ.ಸಿ.ಚಂದ್ರಶೇಖರ್​, ಹನುಮಂತಯ್ಯ, ಬಿ.ವೈ.ಯೋಗಾನಂದ ಕುಮಾರ್​, ಕುಂಬಿ ನರಸಯ್ಯ, ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net