

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಊರಿನ ಜನರೆಲ್ಲ ಸೇರಿ ಸರ್ಕಾರಿ ಶಾಲೆಗೆ ಸುಸಜ್ಜಿತ ಭೋಜನಾಲಯ ನಿರ್ಮಾಣ ಮಾಡಿರುವುದು ಹೆಮ್ಮೆ ವಿಷಯ. ವಿದ್ಯಾರ್ಥಿಗಳು ಕೊರತೆ ಇರುವ ಸಮಯದಲ್ಲಿ ಈ ಶಾಲೆಯಲ್ಲಿ 240ಕ್ಕಿಂತ ಅಧಿಕ ವಿದ್ಯಾರ್ಥಿಗಳಿರುವುದು ಶಾಲೆಯ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಮತ್ತು ಹಳೇ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕೋತ್ಸವ, ಭೋಜನಾಲಯ, ಕುಟೀರ ಮತ್ತು ಬಾಲವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
16.50 ಲಕ್ಷದಲ್ಲಿ ನಿರ್ಮಾಣವಾದ ಭೋಜನಾಲಯವನ್ನು ಸುನೀಲ್ ಕುಮಾರ್ ಉದ್ಘಾಟಿಸಿದರು.
ಕುಟೀರವನ್ನು ಪದ್ಮಾವತಿ ಶೆಟ್ಟಿಗಾರ್, ಬಾಲವನವನ್ನು ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ ಉದ್ಘಾಟಿಸಿದರು. ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಅಧ್ಯಕ್ಷ ರಮಾನಂದ ಶೆಟ್ಟಿ, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಲಕ್ಷ್ಮಣ ಆಚಾರ್ಯ, ಮುಖ್ಯ ಶಿಕ್ಷಕ ಮುದ್ದೂರು ಶ್ರೀನಿವಾಸ್ ಭಂಡಾರಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶ್ರೀಧರ ನಾಯಕ್, ವಾರ್ಷಿಕೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಗಣಪತಿ ಎಂ, ಪ್ರಮುಖರಾದ ರಾಘವೇಂದ್ರ ಕಲ್ಕೂರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಯೋಜನೆ ಅಧಿಕಾರಿ ಲೀಲಾವತಿ ಮೊದಲಾದವರಿದ್ದರು.
ಬೆಳಗ್ಗೆ ಮುದ್ದೇನಹಳ್ಳಿಯ ನಿವೃತ್ತ ಮುಖ್ಯ ಶಿಕ್ಷಕ ಎಂ.ರಾಮಮೂರ್ತಿ ಧ್ವಜಾರೋಹಣ ನೆರವೇರಿಸಿದರು.
ಚಂದ್ರಶೇಖರ ಬಾಯಾರಿ, ಮುದ್ರಾಡಿ ಗ್ರಾಪಂ ಸದಸ್ಯರಾದ ರಮ್ಯಕಾಂತಿ, ಸನತ್ ಕುಮಾರ್ ಮುದ್ರಾಡಿ, ಶಾಂತ ದಿನೇಶ್ ಪೂಜಾರಿ, ಪಿಡಿಒ ಅಮೃತ ಕುಲಾಲ್, ಪ್ರಮುಖರಾದ ಗುರುಪ್ರಸಾದ್ ಹೆಗ್ಡೆ ಕೊಳಂಬೆ, ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ್ ಪೂಜಾರಿ ನಿರೂಪಿಸಿದರು. ಗಣಪತಿ.ಎಂ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಮುದ್ದೂರು ಶ್ರೀನಿವಾಸ ಭಂಡಾರಿ ವರದಿ ವಾಚಿಸಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಶ್ರೀಧರ ನಾಯಕ್ ವಂದಿಸಿದರು.
1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮರಿಯಪ್ಪ ಕಲ್ಕುರ್ ಸ್ಮರಣಾರ್ಥ ಮಕ್ಕಳಿಂದ ದತ್ತಿನಿದಿ ಸಮರ್ಪಣೆ ನಡೆಯಿತು. ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಯಕ್ಷಗಾನ ಪ್ರದರ್ಶನ, ಬಹುಮಾನ ವಿತರಣೆ ನಡೆಯಿತು. ದಾನಿಗಳನ್ನು ಸನ್ಮಾನಿಸಲಾಯಿತು.
ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ಊರಿನ ಸಹಕಾರದಿಂದ ಯಶಸ್ವಿ ಆಗಿರುವುದು ಮುದ್ರಾಡಿಯ ಹೆಮ್ಮೆ. ಬಡತನ, ಅಸ್ಪೃಶ್ಯತೆ, ಮೂಢನಂಬಿಕೆ ತೊಡಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. -ಮುದ್ರಾಡಿ ಮಂಜುನಾಥ ಪೂಜಾರಿ ಶ್ರೀ ಗುರುರಕ್ಷಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ https://www.vijayavani.net/allegations-of-encroachment-of-government-land https://www.vijayavani.net/300-people-serve-the-scales