ಹೊಳೆಇಟಗಿ ಬಳಿ ಸೇತುವೆ ನಿರ್ಮಾಣ: ಗಡ್ಕರಿ ಭರವಸೆ

Nitin Gadkari
Published on

ಶಿರಹಟ್ಟಿ: ತಾಲೂಕಿನ ಹೊಳೆಇಟಗಿ ಮತ್ತು ಬ್ಯಾಲಹುಣಸಿ ಗ್ರಾಮಗಳ ನಡುವೆ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

ಈ ಕುರಿತು ಸಂಸದ ಬಸವರಾಜ ಬೊಮ್ಮಾಯಿ ಅವರು, ಜುಲೈ 30ರಂದು ಪತ್ರದ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದರು. ಬೊಮ್ಮಾಯಿ ಅವರ ಮನವಿಗೆ ಸ್ಪಂದಿಸಿರುವ ಗಡ್ಕರಿ ಈ ಸೇತುವೆ ನಿರ್ಮಾಣದ ಕುರಿತು ಗಮನ ಹರಿಸಿದ್ದೇವೆ. ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಸೇತುವೆ ನಿರ್ಮಾಣವಾದರೆ ಸುತ್ತಲಿನ ಹಳ್ಳಿಗಳ ಜನರ ಪ್ರಯಾಣ ಸುಗಮವಾಗಲಿದೆ. ಬಹು ವರ್ಷಗಳ ಬೇಡಿಕೆ ಈಡೇರಿಸಿದಂತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net