ಕಳಸೂರ ಬಳಿ ವರದಾ ನದಿಗೆ ಬ್ಯಾರೇಜ್ ನಿರ್ಮಾಣ

Construction of a barrage on the Varada River near Kalasur
Published on

ಸವಣೂರ: ಕಳಸೂರ ಗ್ರಾಮದ ಹತ್ತಿರದ ವರದಾ ನದಿಗೆ ಪ್ರತ್ಯೇಕ ಬ್ಯಾರೇಜ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆಯಿಟ್ಟಿದ್ದಾರೆ. ಬರುವ ಅಧಿವೇಶನದಲ್ಲಿ ರ್ಚಚಿಸಿ, ಶೀಘ್ರದಲ್ಲಿ ಬ್ಯಾರೇಜ್ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಭರವಸೆ ನೀಡಿದರು.

ತಾಲೂಕಿನ ಕಳಸೂರಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಾಮ ಪಂಚಾಯಿತಿ ನೂತನ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡ ಉದ್ಘಾಟನೆ ಹಾಗೂ ಗ್ರಾಪಂ ಹಾಲಿ, ಮಾಜಿ ಸದಸ್ಯರು, ಅಧಿಕಾರಿಗಳು ಮತ್ತು ಗಣ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳಸೂರ ಗ್ರಾಪಂ ವ್ಯಾಪ್ತಿಯ ಕಳಸೂರ, ಮಂಟಗಣಿ, ಕಲಕೋಟಿ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ಇದೆ. ಕಳಸೂರ ಗ್ರಾಪಂನಲ್ಲಿ ಮಹಿಳೆಯರೇ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒ ಇದ್ದು, ಎಲ್ಲರ ಸಹಕಾರದಿಂದ ಈ ಬೃಹತ್ ಕಟ್ಟಡ ಕಟ್ಟಲು ಸಾಧ್ಯವಾಗಿದೆ. ಗ್ರಾಪಂ ಆವರಣದಲ್ಲಿ ಸ್ಥಳಾವಕಾಶವಿದ್ದು, ಕಾಂಪೌಂಡ್ ಕಟ್ಟಲು ಅನುದಾನ ನೀಡಲಾಗುವುದು ಎಂದರು.

ಗ್ರಾಪಂ ಸದಸ್ಯ ಶ್ರೀಧರ ದೊಡ್ಡಮನಿ ಮಾತನಾಡಿದರು. ಹತ್ತಿಮತ್ತೂರಿನ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪವಿತ್ರಾ ಬಸವಣ್ಣೆಪ್ಪ ಮಂಟಗಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಪುಟ್ಟಪ್ಪ ಮರಗಿ, ಜಗದೀಶ ಮಂಟಗಣಿ, ಪ್ರಮುಖರಾದ ಶಿವಾಜಪ್ಪ ಪುಟ್ಟಣ್ಣನವರ, ಎಚ್.ಎಸ್. ಪಾಟೀಲ, ರಮೇಶ ಸಿಂಗಣ್ಣನವರ ಮಾತನಾಡಿದರು. ಹಾವೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ. ಮೈದೂರ, ಸವಣೂರ ತಾಲೂಕು ಅಧ್ಯಕ್ಷ ಸುಭಾಷ ಮಜ್ಜಗಿ, ಗ್ರಾಪಂ ಉಪಾಧ್ಯಕ್ಷೆ ಶ್ವೇತಾ ಬಳ್ಳಾರಿ ಹಾಗೂ ಇತರರಿದ್ದರು. ರಮೇಶ ಕ್ಯಾಲಕೊಂಡ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net