ಹುಳಿಯಾರು ನಿರಾಶ್ರಿತರಿಗೆ 400 ಮನೆ ನಿರ್ಮಾಣ ಶ್ರೀಘ

Published on


ಶಾಸಕ ಸಿ.ಬಿ.ಸುರೇಶ್​ಬಾಬು ಭರವಸೆ, 46 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ

ಹುಳಿಯಾರು: ಹುಳಿಯಾರು ಭಾಗದ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಕೆಂಕೆರೆ ಗ್ರಾಪಂ ವ್ಯಾಪ್ತಿಯಲ್ಲಿ 20 ಎಕರೆ ಜಮೀನು ಗುರುತಿಸಲಾಗಿದ್ದು, ಸ್ಲಂ ಬೋರ್ಡ್​ ಹಾಗೂ ಆಶ್ರಯ ಯೋಜನೆಯಡಿ ಶೀರ್ದಲ್ಲೇ 400 ಮನೆ ನಿರ್ಮಿಸಿ, ಅರ್ಹರಿಗೆ ಹಂಚಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ಹುಳಿಯಾರು ಪಟ್ಟಣಕ್ಕೆ ಅಮೃತ್​ 2.0 ಯೋಜನೆಯಡಿ 46 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅನಾರೋಗ್ಯಕ್ಕೆ ಮಲಿನ ನೀರೂ ಕಾರಣವಾಗಲಿದ್ದು, ಹುಳಿಯಾರು ಪಪಂ ವ್ಯಾಪ್ತಿಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಬೋರನಕಣಿವೆ ಜಲಾಶಯದ ನೀರನ್ನು ಶುದ್ಧೀಕರಿಸಿ ಪಪಂ ವ್ಯಾಪ್ತಿಯ ನಾಗರಿಕರಿಗೆ ಪೂರೈಸಲಾಗುವುದು. ಇನ್ನೆರಡು ವರ್ಷದಲ್ಲಿ ಮನೆಮನೆಗೂ ನಲ್ಲಿ ಅಳವಡಿಸಿ, ಸಮರ್ಪಕ ನೀರು ಪೂರೈಸಲಾಗುವುದು. ನಾಗರಿಕರು ಗುಣಮಟ್ಟದ ಕಾಮಗಾರಿಯತ್ತ ಗಮನಹರಿಸಬೇಕು. ಪೈಪ್​ಲೈನ್​ನಿಂದ ಅಕ್ರಮ ಸಂಪರ್ಕ ಪಡೆದರೆ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಮಟ್ಟದ ಸೌಕರ್ಯ: ಹುಳಿಯಾರು ಪಟ್ಟಣಕ್ಕೆ ತಾಲೂಕಿನಂತೆಯೇ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ 8 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ಮೂಲಗಳಿಂದ 40 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದಾದ್ಯಂತ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುವುದು. ಅಲ್ಲದೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲೂ 54 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು.

ಹಳ್ಳಿ ಕಡೆಯೂ ಸ್ವಲ್ಪ ನೋಡಿ ಸ್ವಾಮಿ:ಯಾವ ಯೋಜನೆ ಬಂದರೂ ಪಟ್ಟಣ ಪ್ರದೇಶದಲ್ಲೇ ಮೊದಲು ಜಾರಿ ಮಾಡುತ್ತೀರಿ. ಹಳ್ಳಿ ಕಡೆಯೂ ಸ್ವಲ್ಪ ನೋಡಿ ಸ್ವಾಮಿ… ಹಳ್ಳಿ ಜನರಿದ್ದರೇ ನೀವು. ಅವರ ಆರೋಗ್ಯದ ಕಡೆಯೂ ಗಮನ ಕೊಡಿ. ಹುಳಿಯಾರು ಪಟ್ಟಣದ ಚರಂಡಿ ನೀರು ಸೋಮಜ್ಜನಪಾಳ್ಯದ ಮೂಲಕ ಹರಿಯುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿ ಊರಿನಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಮೊದಲು ಚರಂಡಿ ನೀರು ಹರಿಯುವುದನ್ನು ನಿಲ್ಲಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ರೈತ ಮುಖಂಡ ಬೀರಲಿಂಗಯ್ಯ ಶಾಸಕರಿಗೆ ಮನವಿ ಮಾಡಿದರು. ಮುಖ್ಯಾಧಿಕಾರಿ ನಾಗಭೂಷಣ್​ ಅವರು ಗ್ರಾ$್ಯವಿಟಿ ಲೆವೆಲೆ ಚೆಕ್​ ಮಾಡಿಸಿ ಸೋಮಜ್ಜನಪಾಳ್ಯಕ್ಕೆ ಕೊಳಚೆ ನೀರು ಹರಿಯದಂತೆ ಡೈವರ್ಟ್​ ಮಾಡುವುದಾಗಿ ತಿಳಿಸಿದರು.

ಪ್ಲೋರೈಡ್​ ನೀರು ಕುಡಿಯುತ್ತಿದ್ದೇವೆ!: ಹುಳಿಯಾರು ಪಟ್ಟಣದಲ್ಲಿಗ ಮನೆಗೊಂದು ಕೊಳವೆ ಬಾವಿ ಕೊರೆಸಲಾಗುತ್ತಿದೆ. ಆದರೆ ಎಲ್ಲ ಕೊಳವೆಬಾವಿಗಳಲ್ಲೂ ಪ್ಲೋರೈಡ್​ ನೀರೇ ಸಿಗುತ್ತಿದೆ. 1,800 ಟಿಡಿಎಸ್​ ಇರುವ ನೀರನ್ನು ಪ್ರಸ್ತುತ ಇಲ್ಲಿನ ಜನ ಕುಡಿಯುತ್ತಿದ್ದಾರೆ. ಬೋರನಕಣಿವೆ ನೀರು 1,00 ಟಿಡಿಎಸ್​ ಒಳಗಿದ್ದರೂ ಕುಡಿಯಲು ಯೋಗ್ಯವಾಗುವಷ್ಟು ಶುದ್ಧೀಕರಿಸಲಾಗುತ್ತಿಲ್ಲ. ಅಮೃತ್​&2 ಯೋಜನೆಯ ಕಾಮಗಾರಿ ಪೂರ್ಣಗೊಂಡು ಬೋರನಕಣಿವೆ ನೀರು ಶುದ್ಧೀಕರಿಸಿ ಕೊಟ್ಟರೆ ಟಿಡಿಎಸ್​ ಮೂವತ್ತಕ್ಕಿಂತ ಕಡಿಮೆಯಾಗುತ್ತದೆ ಎಂದು ಪಪಂ ಸದಸ್ಯ ರಾಜುಬಡಗಿ ತಿಳಿಸಿದರು.

ಮನೆಮನೆಗೂ ನಲ್ಲಿ ಸಂಪರ್ಕ : ಅಮೃತ್​ 2.0 ಯೋಜನೆಯಡಿ ಹೊಸ ಮಾದರಿಯಲ್ಲಿ ನೀರು ಶುದ್ಧೀಕರಿಸಿ ಪ್ರತಿ ಮನೆಮನೆಗೂ ಉಚಿತವಾಗಿ ನಲ್ಲಿ ಸಂಪರ್ಕ ಕಲ್ಪಿಸಿ, ಮೀಟರ್​ ಅಳವಡಿಸಿ, ನಿತ್ಯ ಪ್ರತಿ ವ್ಯಕ್ತಿಗೆ 135 ಲೀಟರ್​ ನೀರು ಪೂರೈಸಲಾಗುವುದು. ನೀರು ಪೂರೈಕೆಯ ಬಗ್ಗೆ ಆನ್​ಲೈನ್​ ಮಾನಿಟರಿಂಗ್​ ವ್ಯವಸ್ಥೆ ಅಳವಡಿಸಲಾಗುವುದು ಎಂದು ನೀರು ಸರಬರಾಜು ಇಲಾಖೆಯ ಎಇಇ ಗಂಗಾಧರ್​ ಹೇಳಿದರು.

ಪಪಂ ಸದಸ್ಯರಾದ ಪ್ರೀತಿ, ಎಸ್​ಆರ್​ಎಸ್​ ದಯಾನಂದ್​, ಹೇಮಂತ್​, ಜಹೀರ್​ ಸಾಬ್​, ಚಂದ್ರಶೇಖರ್​, ಮಂಜನಾಯ್ಕ, ರಾಜುಬಡಗಿ, ಬೀಬೀಪಾತೀಮಾ, ವೆಂಕಟೇಶ್​, ಜಿಪಂ ಮಾಜಿ ಸದಸ್ಯೆ ಮಂಜುಳಾ, ತಾಪಂ ಮಾಜಿ ಸದಸ್ಯ ಏಜೆಂಟ್​ಕುಮಾರ್​, ಗ್ರಾಪಂ ಮಾಜಿ ಅಧ್ಯೆ ಪುಟ್ಟಿಬಾಯಿ, ಜೆಡಿಎಸ್​ ಮುಖಂಡರಾದ ರಾವೇಂದ್ರ, ಗೌಡಿ, ಕಿರಣ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net