ಹೊಸಕೋಟೆ ತಾಲೂಕಿನ 3 ಕಡೆ ಪಶು ಆಸ್ಪತ್ರೆ ನಿರ್ಮಾಣ

Untitled-1
ಹೊಸಕೋಟೆ ತಾಲೂಕಿನ ಹೆಡಕನಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಶರತ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು. ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಜಿಪಂ ಮಾಜಿ ಸದಸ್ಯ ಕೆ.ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಮನ್ಸೂರ್​ ಆಲಿಖಾನ್​, ಎಂಪಿಸಿಎಸ್​ ಅಧ್ಯಕ್ಷ ಎನ್​.ಶ್ರೀನಿವಾಸ್​ ಇದ್ದರು.
Published on

ನಂದಗುಡಿ : ಸರ್ಕಾರದಿಂದ ರೈತರಿಗೆ ಹೈನುಗಾರಿಕೆ ನಡೆಸಲು ಹಲವು ಸೌಲಭ್ಯ ಒದಗಿಸಲಾಗುತ್ತಿದೆ. ಆದ್ದರಿಂದ ತಾಲೂಕಿನ 3 ಭಾಗಗಳಲ್ಲಿ ಪಶು ಆಸ್ಪತ್ರೆ ಸ್ಥಾಪನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ ತಾಲೂಕು ಬೈಲನರಸಾಪುರ ಗ್ರಾಪಂ ವ್ಯಾಪ್ತಿಯ ಹೆಡಕನಹಳ್ಳಿಯಲ್ಲಿ ನಬಾರ್ಡ್​, ಆರ್​ಐಡಿಎಫ್​&30 ಯೋಜನೆಯ 50 ಲಕ್ಷ ರೂ. ವೆಚ್ಚದ ಅನುದಾನದಡಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಬಹುತೇಕ ಗ್ರಾಮಗಳ ರೈತರು ಕೃಷಿ, ತೋಟಗಾರಿಕೆ, ರೇಷ್ಮೆಯೊಂದಿಗೆ ಹೈನುಗಾರಿಕೆಯನ್ನು ಮುಖ್ಯ ಉಪ ಕಸುಬನ್ನಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಂದಗುಡಿ, ಸೂಲಿಬೆಲೆ ಹೋಬಳಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಇವೆರಡು ಹೋಬಳಿಗಳ 59 ಕೆರೆಗಳಿಗೆ ನೀರು ತುಂಬಿಸಲು 140 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

ತಾಲೂಕಿನ 9 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ರೈತರು ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ವಾತಾವರಣ ಸೃಷ್ಟಿಸಲು ತಾಲೂಕಿನ 3 ಭಾಗಗಳಲ್ಲಿ ಪಶು ಆಸ್ಪತ್ರೆ ಸ್ಥಾಪನೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದುರು. ಎಸ್​ಎಫ್​ಸಿಎಸ್​ ಅಧ್ಯಕ್ಷ ಹೊಸಹಳ್ಳಿ ನಾರಾಯಣಗೌಡ, ನಿರ್ದೇಶಕ ಧಮೇರ್ಶ್​, ಎನ್​.ಡಿ.ಬೈರೇಗೌಡ, ಚಂದ್ರಪ್ಪ, ಮಾಜಿ ಅಧ್ಯಕ್ಷ ಎಸ್​.ಮಂಜುನಾಥ್​, ಎಚ್​.ಎಸ್​.ನಾರಾಯಣಸ್ವಾಮಿ, ಪಿಡಿಒ ಸುರೇಶ್​ ಕುಮಾರ್​, ಗ್ರಾಪಂ ಸದಸ್ಯ ಎನ್​.ಎನ್​.ಮಂಜುನಾಥ್​, ಮಾಜಿ ಅಧ್ಯಕ್ಷ ರಾಜೇಶ್​, ನಿರ್ದೇಶಕ ಎನ್​.ಡಿ.ಬೈರೇಗೌಡ, ರಾಜಣ್ಣ, ಮುಖಂಡರಾದ ಮುನಿರಾಜು, ಚಿನ್ನಯ್ಯಪ್ಪ, ಎಂ.ವೆಂಕಟಸ್ವಾಮಿ ಇದ್ದರು.

ವಸತಿ ಶಾಲೆಯಲ್ಲಿ ಪಿಯು ಆರಂಭ : ಕೊಂಡ್ರಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು ಪಿಯುಸಿಗೆ ಮೇಲ್ದರ್ಜೆಗೆ ಏರಿಸಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಮುಂದಿನ ವರ್ಷದಲ್ಲಿ ಪಿಯುಸಿ ಆರಂಭವಾಗಲಿದೆ. ಜತೆಗೆ ಬೈಲನರಸಾಪುರ ಗ್ರಾಮಸ್ಥರು ಬೇಡಿಕೆಯಂತೆ ಗ್ರಾಮದಲ್ಲಿ ಪ್ರೌಢಶಾಲೆ ತೆರೆಯಲು ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ರೈತರ ಬೇಡಿಕೆಯಂತೆ ಹಾಗೂ ಶಾಸಕರ ಅವಿರತ ಹೋರಾಟದ ಫಲವಾಗಿ ತಾಲೂಕಿಗೆ 3 ಪಶು ಆಸ್ಪತ್ರೆಗಳು ಮಂಜೂರಾಗಿದ್ದು, ಎನ್​.ಹೊಸಹಳ್ಳಿ, ಹೆಡಕನಹಳ್ಳಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. > ಡಾ.ಸಿ.ಎನ್​.ನಾರಾಯಣಸ್ವಾಮಿ ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net