

ಹುಬ್ಬಳ್ಳಿ : ರಾಜ್ಯದಲ್ಲಿ ಕಟ್ಟಡ ಕಾರ್ವಿುಕರಿಗೆ ಮನೆ ನಿರ್ವಿುಸಲು ಭೂಮಿ ಗುರುತಿಸಲಾಗಿದೆ. ಒಟ್ಟು 7 ಎಕರೆ ಪ್ರದೇಶದಲ್ಲಿ 2,500 ಕ್ಕೂ ಹೆಚ್ಚು ಮನೆಗಳನ್ನು ನಿರ್ವಿುಸಿ, ಕಟ್ಟಡ ಕಾರ್ವಿುಕರಿಗೆ ಹಸ್ತಾಂತರಿಸಲಾಗುವುದು ಎಂದು ಕಾರ್ವಿುಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕಾರ್ವಿುಕ ಇಲಾಖೆ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಧಾರವಾಡ ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ವಿುಕರಿಗೆ ಟೂಲ್ಸ್ ಕಿಟ್, ಧನ ಸಹಾಯದ ಮಂಜೂರಾತಿ ಆದೇಶದ ಚೆಕ್, ಅಸಂಘಟಿತ ಕಾರ್ವಿುಕರಿಗೆ ಅಪಘಾತ ಪರಿಹಾರ ಧನ ಸಹಾಯದ ಚೆಕ್ ಮತ್ತು ನೋಂದಣಿ ಪ್ರಮಾಣ ಪತ್ರಗಳ ವಿತರಣೆ ಹಾಗೂ ವಿವಿಧ ಕಾರ್ವಿುಕ ಕಾಯ್ದೆಗಳಡಿ ಕಾರ್ವಿುಕರಿಗೆ ಮಂಜೂರಾದ ಆದೇಶದ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 56 ಲಕ್ಷ ಕಾರ್ವಿುಕ ಕಾರ್ಡ್ ನೋಂದಣಿ ಮಾಡಿದ್ದು, ಇದರಲ್ಲಿ 20 ಲಕ್ಷ ನಕಲಿ ಕಾರ್ಡ್ ಹೊಂದಿರುವುದು ಕಂಡು ಬಂದಿದೆ. ಹೀಗಾಗಿ, 20 ಲಕ್ಷ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಅರ್ಹ ಫಲಾನುಭವಿಗಳ ಕಾರ್ಡ್ ರದ್ದಾಗಿರುವುದರ ಬಗ್ಗೆ ಮಾಹಿತಿ ನೀಡಿದರೆ, ಮರಳಿ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು. ಕರ್ನಾಟಕ ಕಟ್ಟಡ ಮತ್ತು ಇತರೆ ನಿಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯ ಜಂಟಿ ನಿರ್ದೇಶಕ ಸಂಗಪ್ಪ ಉಪಾಸೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹುಡಾ ಅಧ್ಯಕ್ಷ ಶಾಕೀರ ಸನದಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಆರ್.ಪಾಟೀಲ, ಎಸ್ಪಿ ಡಾ.ಗೋಪಾಲ ಬ್ಯಾಕೋಡ, ಕಾರ್ವಿುಕ ಇಲಾಖೆಯ ಸಹಾಯಕ ಕಾರ್ವಿುಕ ಆಯುಕ್ತೆ ಶ್ವೇತಾ ಎಸ್., ಹಿರಿಯ ಅಧಿಕಾರಿಗಳಾದ ಮಾರಿಕಾಂಬಾ ಹುಲಕೋಟಿ, ಅಶೋಕ ಒಡೆಯರ, ಕಾಂಗ್ರೆಸ್ ಮುಖಂಡರಾದ ಅಲ್ತಾಫ ಹಳ್ಳೂರ, ಮೋಹನ ಹಿರೇಮನಿ ಹಾಗೂ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ನೋಂದಾಯಿತ 3,050 ಕಟ್ಟಡ ಕಾರ್ವಿುಕರಿಗೆ ಕಿಟ್ ಹಾಗೂ ಅಪಘಾತ ಪರಿಹಾರ ಚೆಕ್ ವಿತರಿಸಲಾಯಿತು. ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ಪರಿಹಾರ ಚೆಕ್, ಕನಿಷ್ಠ ವೇತನ ಕಾಯ್ದೆ ಹಾಗೂ ಉಪಧನ ಪಾವತಿ ಕಾಯ್ದೆಯಡಿ ಕಾರ್ವಿುಕರಿಗೆ ಆದೇಶ ಮೊತ್ತದ ಚೆಕ್, ಅಸಂಘಟಿತ ಕಾರ್ವಿುಕರಿಗೆ ನೋಂದಣಿ ಪ್ರಮಾಣ ಪತ್ರಗಳನ್ನು ಹಾಗೂ 500 ಗುರುತಿನ ಚೀಟಿ ವಿತರಿಸಲಾಯಿತು.