ಐಟಿಐ, ಪಿಯು ಕಾಲೇಜು ಕಟ್ಟಡ ನಿರ್ಮಿಸಿ

ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ತೋರಣಗಲ್ ನಾಡಕಚೇರಿಯ ಆರ್‌ಐ ಗಣೇಶ್‌ಗೆ ಮನವಿ ಸಲ್ಲಿಸಲಾಯಿತು. ಎಸ್‌ಫ್‌ಐ ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ, ಎಸ್‌ಎಫ್‌ಐ ಕಾಲೇಜು ಅಧ್ಯಕ್ಷ ಗುಣಶೇಖರ್, ಕಾರ್ಯದರ್ಶಿ ಹರ್ಷ, ಸಹಕಾರ್ಯದರ್ಶಿ ಲೋಕೇಶ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಪ್ರಮುಖರಾದ ಅರ್ಚನಾ, ಸಂಗೀತಾ, ಶ್ರಾವಣಿ, ಅಸ್ಮಿತಾ, ಕೀರ್ತಿ ಇತರರಿದ್ದರು.

Published on

ಸಂಡೂರು: ತಾಲೂಕಿನ ತೋರಣಗಲ್ ಗ್ರಾಮದ ಸವೆರ್ ನಂ.60ರಲ್ಲಿ ಪೊಲೀಸ್ ಇಲಾಖೆಗೆ ಭೂಮಿ ನೀಡದೆ ಐಟಿಐ ಮತ್ತು ಪಿಯುಸಿ ಕಾಲೇಜು ಕಟ್ಟಡವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ತಾಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಆರ್‌ಐ ಗಣೇಶಗೆ ಮನವಿ ಸಲ್ಲಿಸಲಾಯಿತು.

ಎಸ್‌ಫ್‌ಐ ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ ಮಾತನಾಡಿ, ತೋರಣಗಲ್ ಗ್ರಾಮದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆ ಮಾಡಲಾಗಿದೆ. ಶಿಕ್ಷಣಕ್ಕಾಗಿ ಸುತ್ತಲಿನ ವಿದ್ಯಾರ್ಥಿಗಳು ಬಳ್ಳಾರಿ, ಹೊಸಪೇಟೆ ಹಾಗೂ ದೂರದ ಊರುಗಳಿಗೆ ತೆರಳುವುದು ಅನಿವಾರ್ಯ. ಸರ್ಕಾರ ಐಟಿಐ ಮತ್ತು ಸ್ವತಂತ್ರ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿದೆ. ಕಾಲೇಜು ಕಟ್ಟಡವನ್ನು ನಗರದ ಮುಖ್ಯ ರಸ್ತೆಯ ಸರ್ವೇ ನಂ.60ರಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ತೋರಣಗಲ್ ಗ್ರಾಮದ 2.85 ಎಕರೆ ಜಮೀನು ನೀಡಲಾಗಿದೆ. ಅದನ್ನು ರದ್ದು ಮಾಡಿ ಪೊಲೀಸ್ ಇಲಾಖೆಗೆ ನೀಡುವ ತಯಾರಿ ನಡೆಸಲಾಗಿದೆ. ಸರ್ವೇ ನಂ.59ರಲ್ಲಿ 2.92 ಎಕರೆ ಭೂಮಿಯಲ್ಲಿ ಪೊಲೀಸ್ ಇಲಾಖೆಗೆ ವಸತಿ ಗೃಹಗಳನ್ನು ನೀಡಲಾಗಿದೆ. ಆದ್ದರಿಂದ ಪುನಃ ಭೂಮಿ ನೀಡುವುದು ಸರಿಯಲ್ಲ. ಪೊಲೀಸ್ ಇಲಾಖೆಗೆ ಭೂಮಿ ನೀಡಿದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಎಸ್‌ಎಫ್‌ಐ ಕಾಲೇಜು ಅಧ್ಯಕ್ಷ ಗುಣಶೇಖರ್, ಕಾರ್ಯದರ್ಶಿ ಹರ್ಷ, ಸಹಕಾರ್ಯದರ್ಶಿ ಲೋಕೇಶ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ನಾಗಭೂಷಣ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚನ್ನಬಸಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net