ಮುಳವಾಡ ಕ್ರಾಸ್​ ಬಳಿ ಅಂಡರ್​ ಪಾಸ್​ ಬ್ರಿಡ್ಜ್​ ನಿರ್ಮಿಸಿ

Construct an underpass bridge near Mulwada Cross
ಮುಳವಾಡ ಕ್ರಾಸ್​ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಅಂಡರ್​ ಪಾಸ್​ ಬ್ರಿಡ್ಜ್​ ಮತ್ತು ಸರ್ವಿಸ್​ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಮನಗೂಳಿ ಅಂಡರ್​ ಪಾಸ್​ ಹೋರಾಟ ಸಮಿತಿ ಪದಾಧಿಕಾರಿಗಳು ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು. ರೇವಣಸಿದ್ದ ಮನೂರ, ಶಿವನಗೌಡ ಗುಜುಗೊಂಡ, ಭಾಗ್ಯರಾಜ್​ ಸೊನ್ನದ ಮತ್ತಿತರರಿದ್ದರು.
Published on

ವಿಜಯಪುರ : ಮನಗೂಳಿ ಪಟ್ಟಣ ಸಮೀಪದ ಮುಳವಾಡ ಕ್ರಾಸ್​ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಅಂಡರ್​ ಪಾಸ್​ ಬ್ರಿಡ್ಜ್​ ಮತ್ತು ಸರ್ವೀಸ್​ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಮನಗೂಳಿ ಅಂಡರ್​ ಪಾಸ್​ ಹೋರಾಟ ಸಮಿತಿ ಸದಸ್ಯರು ಇತ್ತೀಚೆಗೆ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿದರು.

ಮನಗೂಳಿ ಪಟ್ಟಣದ ಸಮೀಪದ ಮುಳವಾಡ ಕ್ರಾಸ್​ ಬಳಿಯ ರಾಷ್ಟ್ರೀಯ ಹೆದ್ದಾರಿ&50 ರಲ್ಲಿ ಅಂಡರ್​ ಪಾಸ್​ ಇಲ್ಲ. ಹೀಗಾಗಿ ಜನರ ಸಂಚಾರಕ್ಕೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ, ಸದರಿ ಸ್ಥಳದಲ್ಲಿ ಸಾಕಷ್ಟು ಅಪಘಾತಗಳು ಕೂಡ ನಡೆದಿವೆ. ಕೆಲವರು ತಮ್ಮ ಪ್ರಾಣವನ್ನು ಚೆಲ್ಲಿದ್ದಾರೆ. ಅಂಡರ್​ ಪಾಸ್​ ನಿರ್ಮಿಸುವಂತೆ ಈಗಾಗಲೇ ಈ ಹಿಂದೆಯೂ ಕೂಡ ಮನವಿ ಸಲ್ಲಿಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಬ್ರಿಡ್ಜ್​ ನಿರ್ಮಿಸುವಂತೆ ಸುಮಾರು ದಿನಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ. ಬ್ರಿಡ್ಜ್​ ಇಲ್ಲದೆ ಇಲ್ಲಿನ ರೈತರಿಗೆ ಅನಾನುಕೂಲವಾಗುತ್ತಿದೆ. ಹೊಲಗಳಿಗೆ ಹೋಗಲು ಭಯ ಆಗುತ್ತಿದೆ. ಮನಗೂಳಿ ಪಟ್ಟಣದ ನಿವಾಸಿಗಳು ಯಾರಾದರೂ ತೀರಿಕೊಂಡರೆ ಅಂತ್ಯ ಸಂಸ್ಕಾರ ನಡೆಸಲು ಆ ರಸ್ತೆಯಲ್ಲಿಯೇ ಹೋಗುವ ಅನಿವಾರ್ಯವಿದೆ. ಕೂಡಲೇ ಸಂಸದರು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಮುಖಂಡರಾದ ರೇವಣಸಿದ್ದ ಮನೂರ, ಶಿವನಗೌಡ ಗುಜುಗೊಂಡ, ಭಾಗ್ಯರಾಜ್​ ಸೊನ್ನದ, ಈರಪ್ಪ ನಿರಂಜಿ, ಬಾಬು ಬೂದಿಹಾಳ, ಡಾ. ಪತ್ತಾರ, ತಿಪ್ಪಣ್ಣ ಕ್ಯಾತನ್ನವರ, ಸಲಿಮ ಮಕನದಾರ, ಶೇಕಪ್ಪ ಕರಾಬಿ, ಮಹದೇವ ಕರಾಬಿ, ಬಸವರಾಜ್​ ಕೊಪ್ಪದ, ಮಂಜುನಾಥ ಹಿಟ್ನಳ್ಳಿ, ರಮೇಶ ಔರಸಂಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net