ವಜ್ರಹನುಮಾನ ರೈಲ್ವೆ ಕ್ರಾಸಿಂಗ್​ನಲ್ಲಿ ಮೇಲ್ಸೇತುವೆ ನಿರ್ಮಿಸಿ

mm 20-4
Published on

ವಿಜಯಪುರ:ವಜ್ರಹನುಮಾನ ರೈಲ್ವೆ ಕ್ರಾಸಿಂಗ್​ನಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಪಿ.ಜಿ. ಪವಾರ ಅವರಿಗೆ ಮನವಿ ಸಲ್ಲಿಸಿದರು.

ಬಣದ ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ ಮಾತನಾಡಿ, ಇಲ್ಲಿನ ಬಾಗಲಕೋಟೆ ರಸ್ತೆಯ ವಜ್ರಹನುಮಾನ ರೈಲ್ವೆ ಕ್ರಾಸಿಂಗ್​ ಸಲುವಾಗಿ ವಿಶ್ವೇಶ್ವರಯ್ಯ ವೃತ್ತದಿಂದ ರೈಲ್ವೆ ಕ್ರಾಸಿಂಗ್​ವರೆಗೆ ಮೇಲ್ಸೆತುವೆ ನಿರ್ಮಿಸಿ ಜುಮನಾಳ ಕಡೆ ಹೋಗುವ ರಿಂಗ್​ ರಸ್ತೆಗೆ ಸೇರಿಸಬೇಕು.

ಸದ್ಯ ಅಲ್ಲಿ ರೈಲ್ವೆ ಕ್ರಾಸಿಂಗ್​ನಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಾಲಿಕೆ ಆಯುಕ್ತರು ವಾರದ ಹಿಂದೆ ವಜ್ರಹನುಮಾನ ರೈಲ್ವೆ ಕ್ರಾಸಿಂಗ್​ನಲ್ಲಿ ಅಂಡರ್​ ಪಾಸ್​ ರಸ್ತೆ ನಿರ್ಮಿಸಲು ತೀರ್ಮಾನಿಸಿರುವುದಾಗಿ ಹೇಳಿದ್ದಾರೆ. ಆದರೆ, ಅದು ಅವೈಜ್ಞಾನಿಕ ಎಂದು ಸೂರ್ಯವಂಶಿ ತಿಳಿಸಿದರು.

ಅಂಡರ್​ ಪಾಸ್​ ಮಾಡುವ ಬದಲು ಫೈಬರ್​ ಬ್ರಿಜ್​ ನಿರ್ಮಿಸಿ ಜುಮನಾಳ ರೋಡ್​ ರಿಂಗ್​ ರಸ್ತೆಯಿಂದ ರೈಲ್ವೆ ಕ್ರಾಸಿಂಗ್​ ಮಾಡಿಕೊಂಡು ವಿಶ್ವೇಶ್ವರಯ್ಯ ಸರ್ಕಲ್​ ಹತ್ತಿರ ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ನಮ್ಮ ಸಂಟನೆ ಹಾಗೂ ಪ್ರಜ್ಞಾವಂತ ನಾಗರಿಕರು ವಜ್ರಹನುಮಾನ ರೈಲ್ವೆ ಕ್ರಾಸಿಂಗ್​ನಲ್ಲಿ ಅಂಡರ್​ ಪಾಸ್​ ರಸ್ತೆ ಮಾಡಲು ಅವಕಾಶ ನೀಡಲ್ಲ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗ, ಇಂಜಿನಿಯರ್​ಗಳು ಕೂಲಂಕಷವಾಗಿ ಪರಿಶೀಲಿಸಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ವಕ್ತಾರ ಐ.ಟಿ. ಪಡಗಣವರ, ವಿಠಲರಾವ್​ ಈಳಗೇರ, ಸಂಗಯ್ಯ ಸಾರಂಗಿಮಂಠ, ಮಲ್ಲು ಹಡಪದ, ನಾಗು ಪೂಜಾರಿ, ಎಸ್​.ಎಸ್​. ಕಟ್ಟಿ, ರಮೇಶ ಮುಂಡೆವಾಡಿ, ಚಿದಾನಂದ ಹಳ್ಳಿ, ವಿಠಲ ಕರಿಗಾರ, ರಾಜಕುಮಾರ ಉಪ್ಪಾರ, ಸಲೀಂ ವಕ್ರಾಣಿ, ಬಸವರಾಜ ಶಿವಣಗಿ, ಟಿ.ಎಸ್​. ಪಾಟೀಲ, ಕೃಷ್ಣಪ್ಪ ಬಂಡಿವಡ್ದರ, ಬಸಪ್ಪ ಮಾದರ, ಮಂಜುನಾಥ ಪೂಜಾರಿ, ಅಶೋಕ ನಿಡಗುಂದಿ, ಹಂಕಪ್ಪ ಚಲವಾದಿ, ನೀಲಾಂಬಿಕಾ ಬಿರಾದಾರ, ಶಿಲ್ಪಾ ಮೇತ್ರಿ, ಶಶಿಕಲಾ ಬಡಿಗೇರ, ಸುಶೀಲಾ ಮಿಣಜಿಗಿ, ಅಶ್ವಿನಿ ಜಾಧವ, ಸರು ಕಟ್ಟಿಮನಿ, ನೀಲಾ ಕಟ್ಟಿಮನಿ, ಶಶಿಕಲಾ ಬಡಿಗೇರ ಮತ್ತಿತರರಿದ್ದರು.

ವಜ್ರಹನುಮಾನ ರೈಲ್ವೆ ಕ್ರಾಸಿಂಗ್​ನಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಪಿ.ಜಿ. ಪವಾರ ಅವರಿಗೆ ಮನವಿ ಸಲ್ಲಿಸಿದರು. ಜಗದೇವ ಸೂರ್ಯವಂಶಿ, ಐ.ಟಿ. ಪಡಗಣವರ, ಶಿಲ್ಪಾ ಮೇತ್ರಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net