ಅಕ್ರಮವಾಗಿ ಜಾನುವಾರು ಸಾಗಾಟವಾಗದಂತೆ ಚೆಕ್‌ಪೋಸ್ಟ್ ನಿರ್ಮಿಸಿ

12skpp1hindu
ಬಕ್ರೆದ್ ಹಬ್ಬದ ಹಿನ್ನೆಲೆಯಲ್ಲಿ ನೂರಾರು ಗೋವುಗಳು ಅಕ್ರಮವಾಗಿ ವಧೆೆಯಾಗುವ ಸಾಧ್ಯತೆ ಇರುವುದರಿಂದ ಅಕ್ರಮವಾಗಿ ಜಾನುವಾರುಗಳು ಸಾಗಾಟವಾಗದಂತೆ ಸಕಲೇಶಪುರ ತಾಲೂಕಿನ ವಿವಿಧೆೆಡೆ ಚೆಕ್‌ಪೋಸ್ಟ್ ಹಾಕಿ ಕ್ರಮ ಕೈಗೊಳ್ಳಬೇಕೆಂದು ಹಿಂದು ಪರ ಸಂಘಟನೆಗಳ ವತಿಯಿಂದ ಸಕಲೇಶಪುರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
Published on

ಸಕಲೇಶಪುರ: ಬಕ್ರೆದ್ ಹಬ್ಬದ ಹಿನ್ನೆಲೆಯಲ್ಲಿ ನೂರಾರು ಗೋವುಗಳು ಅಕ್ರಮವಾಗಿ ವಧೆಯಾಗುವ ಸಾಧ್ಯತೆ ಇರುವುದರಿಂದ ಅಕ್ರಮವಾಗಿ ಜಾನುವಾರುಗಳು ಸಾಗಾಟವಾಗದಂತೆ ತಾಲೂಕಿನ ವಿವಿಧೆಡೆ ಚೆಕ್‌ಪೋಸ್ಟ್ ಹಾಕಿ ಕ್ರಮ ಕೈಗೊಳ್ಳಬೇಕೆಂದು ಹಿಂದುಪರ ಸಂಘಟನೆಗಳ ಮುಖಂಡ ರಘು ಆಗ್ರಹಿಸಿದರು.

ಪಟ್ಟಣದ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ನಿರಂಜನ್‌ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಣೆ ಹಾಗೂ ಕುರ್ಬಾನಿಗೆ ನಿಷೇಧವಿದೆ. ಆದರೂ ಅಕ್ರಮವಾಗಿ ನೂರಾರು ಗೋವುಗಳನ್ನು ಸಾಗಣೆ ಮಾಡಿ ಮಾಂಸಕ್ಕಾಗಿ ವಧೆ ಮಾಡಲಾಗುತ್ತದೆ. ಕುರ್ಬಾನಿಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಬಕ್ರೆದ್ ಹಬ್ಬದ ಆಚರಣೆ ಮುಗಿಯುವವರೆಗೆ ಸಕಲೇಶಪುರ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ಜಾನುವಾರು ಅಕ್ರಮವಾಗಿ ಸಾಗಾಟವಾಗದಂತೆ ಪೋಲಿಸ್ ಚೆಕ್‌ಪೋಸ್ಟ್ ಸ್ಥಾಪಿಸಬೇಕು. ಮುಸ್ಲಿಂ ಸಮುದಾಯ ಬಹುಸಂಖ್ಯಾತ ಇರುವ ಕೆಲವು ವ್ಯವಸ್ಥಿತ ಪ್ರದೇಶಗಳಲ್ಲಿ ಅಕ್ರಮವಾಗಿ ಜಾನುವಾರು ಶೇಖರಿಸಿ ಇಡದಂತೆ ನಿಗಾ ಇಡಲು ಸಂಬಂಧಪಟ್ಟ ಠಾಣೆಗಳಿಗೆ ಸೂಚಿಸಬೇಕು. ಅಕ್ರಮವಾಗಿ ಗೋಮಾಂಸವನ್ನು ಶೇಖರಿಸಿ ಇಡುವುದು ಹಾಗೂ ಸಾಗಾಟ ಮಾಡಿದರೆ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಿಂದು ಪರ ಸಂಘಟನೆಗಳ ಮುಖಂಡರಾದ ಕೌಶಿಕ್, ಮಂಜುನಾಥ್ ಕಬ್ಬಿನ ಗದ್ದೆ, ನಡಹಳ್ಳಿ ಶಶಿ, ಸುರೇಂದ್ರ, ಶ್ರೀಜಿತ್ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net