ಸಂವಿಧಾನ ಹಕ್ಕು ಎಲ್ಲರಿಗೂ ಸಿಗಲಿ

15dvk 1
Published on

ಬೆಳಗಾವಿ: ಈಚೆಗೆ ಬಿಹಾರ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾಗ ಅನೇಕರು ಮತದಾನದ ಹಕ್ಕು ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದು, ಇದನ್ನು ಸರಿಪಡಿಸುವ ಕಾರ್ಯವಾಗಬೇಕಿದೆ ಎಂದು ಶಾಸಕ ಆಸೀಫ್​ ಸೇಠ ಹೇಳಿದರು.

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆಯಿಂದ ಸುವರ್ಣ ವಿಧಾನಸೌಧ ಸೆಂಟ್ರಲ್​ ಹಾಲ್​ನಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅವರವರ ಮತ ಅವರೇ ಚಲಾಯಿಸಬೇಕು. ಒಬ್ಬನೇ ಹತ್ತು ಜನರ ಮತ ಹಾಕಲು ಹೊರಟರೆ ಅದು ಪ್ರಜಾಪ್ರಭುತ್ವ ಕೊಂದಂತೆ. ಬಿಹಾರ ಹಿಂದುಳಿದ ಮತ್ತು ಹೆಚ್ಚು ಅಶಿಕ್ಷಿತರು ಇರುವ ರಾಜ್ಯ. ಇಂತಹ ರಾಜ್ಯದಲ್ಲಿ ಈಗ ಅನೇಕರಿಗೆ ಮತದಾನದ ಹಕ್ಕಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ, ಸಂವಿಧಾನದಲ್ಲಿರುವ ಹಕ್ಕುಗಳು ಪ್ರತಿಯೊಬ್ಬರಿಗೂ ಸಿಗಲೇಬೇಕು ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳು ಹರದಾಡುತ್ತಿದ್ದು, ಅದರಿಂದ ವೈಯಕ್ತಿಕ ಜೀವನಕ್ಕೆ ಏನು ಉಪಯೋಗ ಎಂದು ತಿಳಿಯಬೇಕು. ಲಾಭವಿದ್ದಲ್ಲಿ ಅದರ ಬಗ್ಗೆ ಅಧ್ಯಯನ ಮಾಡಿ, ಸತ್ಯಾಸತ್ಯತೆ ಅರಿಯಬೇಕು ಎಂದರು.

ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಋಷಿಕೇಶ ದೇಸಾಯಿ ಉಪನ್ಯಾಸ ನೀಡಿದರು. ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ವಿಜೇತರಾದ ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜಿನ ಕಾವೇರಿ ಭಜಂತ್ರಿ, ಸಂಕೇಶ್ವರ ಎಸ್​.ಎಸ್​.ಕಲಾ ಕಾಲೇಜಿನ ಪೂರ್ಣಿಮಾ ಜರಳಿ, ಬೆಳಗಾವಿ ಲಿಂಗರಾಜ್​ ಕಾಲೇಜಿನ ಅನನ್ಯಾ ಕೊಡ್ಲಿ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರಾದ ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜಿನ ಮಂಜುನಾಥ ಹತ್ತಿ, ಚಿಕ್ಕೋಡಿ ಚೌಸನ್​ ಕಾಲೇಜಿನ ಅಶ್ವಿನಿ ಬಿಳಗಿ, ಚಿಕ್ಕೋಡಿ ಸಿಎಲ್​ಇ ಬಿ.ಇಡಿ ಕಾಲೇಜಿನ ಏಕತಾ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು.

ಬುಡಾ ಅಧ್ಯಕ್ಷ ಲಕ್ಷ$್ಮಣರಾವ ಚಿಂಗಳೆ, ನಗರ ಪೊಲೀಸ್​ ಆಯುಕ್ತ ಭೂಷಣ ಬೊರಸೆ, ಎಸ್ಪಿ ಡಾ. ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್​ ಶಿಂಧೆ, ಪ್ರೊಬೆಷನರಿ ಐಎಎಸ್​ ಅಧಿಕಾರಿ ಅಭಿನವ ಜೈನ್​, ಪಾಲಿಕೆ ಆಯುಕ್ತೆ ಶುಭ ಬಿ. ಇತರರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ಸ್ವಾಗತಿಸಿದರು. ರಾಜಶೇಖರ ನೇಗಿನಾಳ ನಿರೂಪಿಸಿದರು. ಬಸವರಾಜ ಚನ್ನಯ್ಯನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net