ಸಂವಿಧಾನದ ಹಕ್ಕು ಚಲಾವಣೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ

electon
ದೇವದುರ್ಗ ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ನರೇಗಾ ಕೂಲಿಕಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಶಿವಪ್ಪ, ಪ್ರಮುಖರಾದ ಈರಣ್ಣ, ಆಂಜನೇಯ, ನಾಗರಾಜ ಅರಳೆಬಂಡಿ, ಸ್ಯಾಮುವೆಲ್, ಕೂಲಿಕಾರರು ಇದ್ದರು.
Published on

ದೇವದುರ್ಗ: ಹದಿನೆಂಟು ವರ್ಷ ಪೂರ್ಣಗೊಂಡ ದೇಶದ ಪ್ರತಿಪ್ರಜೆಗೂ ಸಂವಿಧಾನ ಅಮೂಲ್ಯವಾದ ಮತದಾನ ಹಕ್ಕನ್ನು ನೀಡಿದೆ. ಮತವನ್ನು ಯಾವುದೇ ಕಾರಣಕ್ಕೂ ಆಸೆ, ಆಮಿಷಗಳಿಗೆ ಮಾರಿಕೊಳ್ಳದೆ ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಶಿವಪ್ಪ ಹೇಳಿದರು.

ಭೂಮನಗುಂಡ ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಗ್ರಾಪಂನಿಂದ ನರೇಗಾ ಕೂಲಿಕಾರರಿಗೆ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಇದನ್ನೂ ಓದಿ: ಸಂವಿಧಾನದ ಹಕ್ಕುಗಳು ಸಮರ್ಪಕವಾಗಿ ಸಿಗುತ್ತಿಲ್ಲ
ಪ್ರತಿಯೊಬ್ಬ ಮತದಾರ ಚುನಾವಣೆಯಲ್ಲಿ ಮತ ಚಲಾಯಿಸಿದಾಗ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿದೆ. ಮೇ 10ರಂದು ಪ್ರತಿಯೊಬ್ಬರೂ ಮತದಾನ ಮಾಡುವಂತೆ ಮನವಿ ಮಾಡಿದರು. ಕಡ್ಡಾಯ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net