ಸಂವಿಧಾನ ಅಸ್ಥಿರಗೊಳಿಸುವ ಹುನ್ನಾರ

29 mlv2
Published on

ಬೆಳಕವಾಡಿ: ಮೀಸಲಾತಿ ಕೊಡುವ ವಿಚಾರಗಳು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರವೆಂದು ಸುಪ್ರೀಂಕೊರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಬೆಳಕವಾಡಿ ಗ್ರಾಮದ ಅಂಬೇಡ್ಕರ್ ಯುವಕರ ಸಂಘದವರು ಶನಿವಾರ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಸಂವಿಧಾನವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ. ದೇಶದಲ್ಲಿ ಶೇ.3 ರಷ್ಟಿ ರುವ ಬ್ರಾಹ್ಮಣರು ಹಾಗೂ ಬನಿಯಾ ಸಮುದಾಯದವರು ಕಾನೂನು ಸೇರಿದಂತೆ ಸರ್ಕಾರದ ಪ್ರಮುಖ ಖಾತೆಗಳನ್ನು ಪಡೆದು ಪ್ರಪಂಚದಲ್ಲೇ ಶ್ರೇಷ್ಠತೆಯನ್ನು ಹೊಂದಿರುವ ಸಂವಿಧಾನವನ್ನು ತಮಗಿಷ್ಟ ಬಂದಂತೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಂತರ ಪ್ರತಿಭಟನಾಕಾರರು ಉಪತಹಸೀಲ್ದಾರ್ ಸಿದ್ದಮ್ಮ ಅವರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಲು ಮನವಿ ಮಾಡಿದರು. ಗ್ರಾಪಂ ಸದಸ್ಯರಾದ ಮಧುಸೂದನ್, ಹರ್ಷದ್ ಪಟೇಲ್, ಸಂಘದ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ಹೇಮಂತ್, ಮುಖಂಡರಾದ ಬಿ.ಎಂ.ಕಾಂತರಾಜು, ಮಹದೇವಸ್ವಾಮಿ, ಪ್ರಶಾಂತ್, ಚೇತನ್, ಶಂಕರಯ್ಯ, ನಾಜೀರ್ ಪಾಷ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net