ಸಮುದಾಯದ ಓಲೈಕೆಗೆ ಸಂವಿಧಾನ ಬದಲಾವಣೆ

Constitutional change to appease the community
ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವಿರುದ್ಧ ಬೀಳಗಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ಅರ್.ನಿರಾಣಿ ಮಾತನಾಡಿದರು. ಹೊಳಬಸು ಬಾಳಶಟ್ಟಿ, ಮುತ್ತು ಬೋರ್ಜಿ ಮತ್ತಿತರರಿದ್ದಾರೆ.
Published on

ಬೀಳಗಿ: ಸಂವಿಧಾನ ಬದಲಾವಣೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ, ಮುಸ್ಲಿಮರಿಗೆ ಶೇ. 4 ಮೀಸಲಾತಿ ಹಾಗೂ ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿರುವುದನ್ನು ಖಂಡಿಸಿ ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಶಾಸಕ ಹಣಮಂತ ಆರ್.ನಿರಾಣಿ ಮಾತನಾಡಿ, ಮೀಸಲಾತಿ ವಿಷಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ.

ರಾಜ್ಯದ ಜನರಿಗೆ ಸಂವಿಧಾನದ ಹೆಸರು ಹೇಳಿ ಸರ್ಕಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಇಂದು ಅದೇ ಸಂವಿಧಾನ ಬದಲಾವಣೆ ಮಾಡಲು ಸಿದ್ಧವಾಗಿದೆ. ಕಾಂಗ್ರೆಸ್‌ನವರು ಹಿಂದೆ ಕೂಡ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವರ ಅಂತ್ಯಕ್ರಿಯೆ ಮಾಡಲು ದೆಹಲಿಯಲ್ಲಿ ಜಾಗ ನೀಡದೆ ಅವಮಾನಿಸಿದ್ದರು. ಯಾವುದೋ ಸಮುದಾಯ ಓಲೈಕೆಗಾಗಿ ಸಂವಿಧಾನ ಕುರಿತು ಮಾತನಾಡುವ ಡಿಕೆಶಿ ಹೇಳಿಕೆ ಖಂಡನೀಯ ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ಜನಸಾಮಾನ್ಯರ ಕಲ್ಯಾಣ ಬಯಸದೆ ಸ್ವಾರ್ಥಕ್ಕಾಗಿ ಜನರ ಕಣ್ಣಿಗೆ ಸುಣ್ಣ ಹಚ್ಚಿದ್ದಾರೆ ಎಂದರು.

ಕೃಷ್ಣಾ ಯೋಜನೆಯ ಯಾವುದೇ ಕೆಲಸ ಮಾಡದೆ ಜನರಿಗೆ ಸುಳ್ಳು ಭರವಸೆ ನೀಡಿ ಕಾಲಹರಣ ಮಾಡುತ್ತಿದೆ. ಡಿ.ಕೆ.ಶಿವಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕ್ಷಮೆ ಕೇಳಬೇಕು. ಶೇ.4 ಮೀಸಲಾತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಹೊಳಬಸು ಬಾಳಶೆಟ್ಟಿ ಮಾತನಾಡಿದರು. ಮಾಜಿ ಅಧ್ಯಕ್ಷ ಎಂ.ಎಂ. ಶಂಭೋಜಿ, ಹಿರಿಯ ಮುಖಂಡ ವಿ.ಜಿ.ರೇವಡಿಗಾರ, ಮಲ್ಲಿಕಾರ್ಜುನ ಅಂಗಡಿ, ಶ್ರೀಶೈಲ ಯಂಕಂಚಿಮಠ, ಪಪಂ ಅಧ್ಯಕ್ಷ ರಾಮಚಂದ್ರ ಬೋರ್ಜಿ, ಪಪಂ ಸದಸ್ಯರಾದ ಸಿದ್ದಲಿಂಗೇಶ ನಾಗರಾಳ, ಸಂತೋಷ ನಿಂಬಾಳ್ಕರ್, ಪರಶುರಾಮ ಮಮದಾಪುರ, ರಮೇಶ ಗಾಣಿಗೇರ, ವಿಠಲ ಗಡ್ಡದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net