ನಂಜನಗೂಡಿನಲ್ಲಿ ಸಂವಿಧಾನ ಸನ್ಮಾನ ಅಭಿಯಾನ

05 njd news 01
ನಂಜನಗೂಡು ಯಾತ್ರಿ ಭವನ ಕಲ್ಯಾಣ ಮಂಟಪದಲ್ಲಿ ಸಂವಿಧಾನ ಸನ್ಮಾನ ದಿನ ಆಚರಿಸಲಾಯಿತು. ಸಿದ್ದರಾಜು, ಫನಿಸ್, ಎಸ್.ಮಹದೇವಯ್ಯ, ಪ್ರಫುಲ್ಲ ಮಲ್ನಾಡ್, ನಾರಾಯಣ ಮಲ್ನಾಡ್, ಹೆಮ್ಮರಗಾಲ ಸೋಮಣ್ಣ ಇದ್ದರು.
Published on

ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಗ್ರಾಮಾಂತರ ಮತ್ತು ಮಂಡಲ ವತಿಯಿಂದ ನಂಜನಗೂಡು ನಗರದಲ್ಲಿರುವ ಯಾತ್ರಿ ಭವನ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಾಜಿ ಶಾಸಕ ಹರ್ಷವರ್ಧನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮ ಬಿ.ಜೆ.ಪಿ ವತಿಯಿಂದ ನಡೆಯುತ್ತಿದ್ದು, ಒಳ್ಳೆಯ ಕಾರ್ಯಕ್ರಮ ಆಗಬೇಕು. ಕಾಂಗ್ರೆಸ್ ಬಯ್ಯುವ ಕಾರ್ಯಕ್ರಮ ಆಗಬಾರದು. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 106 ಬಾರಿ ಸಂವಿಧಾನ ತಿದ್ದುಪಡಿಯಾಗಿದೆ. ಇದರಲ್ಲಿ 75 ಬಾರಿ ಕಾಂಗ್ರೆಸ್ ಪಕ್ಷವೇ ತಿದ್ದುಪಡಿ ಮಾಡಿ ದೊಡ್ಡ ಸ್ಥಾನದಲ್ಲಿದೆ. ಅಧಿಕಾರ ಮತ್ತು ಕುರ್ಚಿ ಉಳಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. 2015ರಿಂದ ಈಚೆಗೆ ನರೇಂದ್ರ ಮೋದಿ ಸರ್ಕಾರ ಸಂವಿಧಾನ ದಿನಾಚರಣೆ ಪ್ರಾರಂಭಿಸಿತು. ಎಲ್ಲರಿಗೂ ಸಂವಿಧಾನ ಒಂದೇ, ಕಾನೂನು ಕೂಡ ಒಂದೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಇರುವುದರಿಂದ ನಾವು ಸುರಕ್ಷಿತರಾಗಿದ್ದೇವೆ. ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಬಾರದು. ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ ಆಗಿರಬೇಕು ಎಂಧರು.

ಎಸ್ಸಿ ಎಸ್ಟಿ ಹಣದಲ್ಲಿ ಹಾಸನದಲ್ಲಿ ಸ್ವಾಭಿಮಾನಿ ಮತ್ತು ಜನಕಲ್ಯಾಣ ಸಮಾವೇಶವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇಂದು, ನಾಳೆ ಜೈಲಿಗೆ ಹೋಗುವ ಕೆಲ ನಾಯಕರು ಹಾಸನದಲ್ಲಿ ಸಮಾವೇಶ ಮಾಡುತ್ತಾ ಇದ್ದಾರೆ. ಸಂವಿಧಾನ ಅರಿವು ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮವಾಗಿದೆ. ಮುಂದಿನ ಪೀಳಿಗೆಗೂ ನಾವು ಸಂವಿಧಾನದ ಸಂದೇಶವನ್ನು ತಿಳಿಸುವ ಪ್ರಯತ್ನ ಮಾಡಬೇಕು. ಕಾನೂನಿಗಿಂತ ಮೊದಲು ಸಂವಿಧಾನವಿದೆ. ಜನಸಂಖ್ಯೆ ಆಧಾರದ ಮೇಲೆ ಜಾತಿ ಮತ್ತು ಜನಗಣತಿ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು, ಮುಖಂಡರಾದ ಎಸ್.ಮಹದೇವಯ್ಯ, ಫನಿಸ್, ಪ್ರಫುಲ್ಲ ಮಲ್ನಾಡ್, ನಾರಾಯಣ ಮಲ್ನಾಡ್, ಹೆಮ್ಮರಗಾಲ ಸೋಮಣ್ಣ, ಕೆಂಡಗಣ್ಣಪ್ಪ, ಸಿಂಧುವಳ್ಳಿ ಕೆಂಪಣ್ಣ, ಮಹದೇವಸ್ವಾಮಿ, ಬದನವಾಳು ರಾಮು, ರದನಹಳ್ಳಿ ಬಸಪ್ಪ, ನಂದಿನಿ, ಶ್ರೀನಿವಾಸ ರೆಡ್ಡಿ, ಚಿಕ್ಕರಂಗನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net