ಜ.18 ಮತ್ತು 19ರಂದು ಸಂವಿಧಾನ ಓದು ಅಧ್ಯಯನ ಶಿಬಿರ: ಕೇಂದ್ರ ಸಂಯೋಜಕ ಬಿ.ರಾಜಶೇಖರಮೂರ್ತಿ ಮಾಹಿತಿ

Constitution Reading Campaign-Karnataka Press Conference Mandya
Published on

ಮಂಡ್ಯ: ಸಂವಿಧಾನ ಓದು ಅಭಿಯಾನ-ಕರ್ನಾಟಕದ ವತಿಯಿಂದ ಜ.18 ಮತ್ತು 19ರಂದು ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ‘ಸಂವಿಧಾನ ಓದು ಅಧ್ಯಯನ ಶಿಬಿರ’ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಕೇಂದ್ರ ಸಂಯೋಜಕ ಬಿ.ರಾಜಶೇಖರಮೂರ್ತಿ ತಿಳಿಸಿದರು.

ಸಾರ್ವಜನಿಕ ವ್ಯವಸ್ಥೆಯಲ್ಲಿ ಸಂವಿಧಾನ ಓದುವವರು ಸಂಖ್ಯೆ ಇಮ್ಮಡಿಗೊಳಿಸುವ ಉದ್ದೇಶದಿಂದ ಹಾಗೂ 10 ಲಕ್ಷ ಸಂವಿಧಾನ ಓದು ಪರಿಷ್ಕೃತ ಕೃತಿಯನ್ನು ಜನರಿಗೆ ತಲುಪಿಸುವುದು ಕಾರ್ಯಕ್ರಮದ ಗುರಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

18ರಂದು ಬೆಳಗ್ಗೆ 10 ಗಂಟೆಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ದಲಿತ ಮುಖಂಡ ಅಂದಾನಿ ಸೋಮನಹಳ್ಳಿ, ರೈತ ನಾಯಕಿ ಸುನಂದಾ ಜಯರಾಂ ಭಾಗವಹಿಸಲಿದ್ದಾರೆ. 11.30ಕ್ಕೆ ಸಂವಿಧಾನದ ರಚನೆ ಮತ್ತು ಮೂಲ ತತ್ವಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ಸಂವಿಧಾನ: ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆ ಕುರಿತು ಕಿಗ್ಗ ರಾಜಶೇಖರ ವಿಷಯ ಮಂಡಿಸುವರು. ಮಧ್ಯಾಹ್ನ 3.30ಕ್ಕೆ ಸಂವಿಧಾನ ಮತ್ತು ಮಹಿಳೆ ಕುರಿತು ಶಾಮತಿ ನಾಗಲಾಪುರ ವಿಷಯ ಮಂಡಿಸಲಿದ್ದಾರೆ ಎಂದರು.

19ರಂದು ಬೆಳಗ್ಗೆ 10ಕ್ಕೆ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಕುರಿತು ಡಾ.ಕರಿಯಣ್ಣ ಹಾಗೂ 11ಕ್ಕೆ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಬಿ.ರಾಜಶೇಖರಮೂರ್ತಿ ವಿಷಯ ಮಂಡಿಸುವರು. ಮಧ್ಯಾಹ್ನ 2ಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಸಮಾರೋಪ ಹಾಗೂ ಪ್ರಶಸ್ತಿ ಪತ್ರ ವಿತರಣೆ ನಡೆಯಲಿದೆ ಎಂದು ವಿವರಿಸಿದರು.

ಸಂವಿಧಾನ ಓದು ಅಭಿಯಾನ- ಕರ್ನಾಟಕ ಕೇಂದ್ರ ಸಂಯೋಜಕ ಎಚ್.ಎನ್.ಹರಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು, ಎಂ.ವಿ.ಕೃಷ್ಣ, ಸಿ.ಕುಮಾರಿ, ಲಕ್ಷ್ಮಣ್ ಚೀರನಹಳ್ಳಿ, ಟಿ.ಎಲ್.ಕೃಷ್ಣೇಗೌಡ, ಎಚ್.ಎನ್.ನರಸಿಂಹಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net