ಸಂವಿಧಾನದ ಉದ್ದೇಶ ಕಾಪಾಡಲು ಬದ್ಧರಾಗಲಿ

15Anand6
ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಾನವ ಸರಪಳಿಗೆ ಬಸವರಾಜ ಹೆಗ್ಗನಾಯಕ ಚಾಲನೆ ನೀಡಿದರು. ರಮೇಶ ಹೆಗಡೆ, ಬಿ.ಡಿ.ಕಡೆಮನಿ, ಲಕ್ಷ್ಮಣ ದಂಡಾಪುರ ಇತರರು ಇದ್ದರು.
Published on

ಬೆಳಗಾವಿ: ಪ್ರಜಾಪ್ರಭುತ್ವ ಬಲಪಡಿಸುವುದು ಮತ್ತು ಅದರ ಮೌಲ್ಯಗಳನ್ನು ಅರಿಯುವುದು ಪ್ರಜಾಪ್ರಭುತ್ವ ದಿನಾಚರಣೆಯ ಉದ್ದೇಶ ಎಂದು ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಹೇಳಿದರು.

ತಾಲೂಕಿನ ಸಾಂಬ್ರಾದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಭಾನುವಾರ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ಸರಪಳಿಯು ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತತ್ವದ ಸಂಕೇತ ಎಂದರು.

ತಾಲೂಕಿನ ಕರಡಿಗುಡ್ಡಿ ಗ್ರಾಮದಿಂದ ಮೊದಗಾ ಗ್ರಾಮದವರೆಗೆ ವಿವಿಧ ಯುವ ಸಂಘಟನೆ, ನಿವತ್ತ ಸೈನಿಕರು, ಸ್ತ್ರೀ ಶಕ್ತಿ ಸಂಘ, ಅಂಗನವಾಡಿ ಆಶಾ ಕಾರ್ಯಕರ್ತೆಯರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರ ಮೂಲಕ ಬಹತ್ ಮಾನವ ಸರಪಳಿ ನಿರ್ಮಿಸಿದರು. ಕಾರ್ಯಕ್ರಮದ ಪ್ರಯುಕ್ತ ಸಾಂಬ್ರಾ ಗ್ರಾಮದಲ್ಲಿ ವಿನೂತನವಾಗಿ ಭಜನೆ, ಡೊಳ್ಳು ಕುಣಿತ, ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಮಜಲು ವಾದ್ಯ ನುಡಿಸುವ ತಂಡಗಳು ಸೇರಿ ವಿವಿಧ ಕಲಾ ತಂಡಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಇಒ ರಮೇಶ ಹೆಗಡೆ, ಸಹಾಯಕ ನಿರ್ದೇಶಕ ಬಿ.ಡಿ.ಕಡೆಮನಿ, ಗ್ರಾಪಂ ಅಧ್ಯಕ್ಷೆ ರಚನಾ ಗಾವಡೆ, ಉಪಾಧ್ಯಕ್ಷ ಮಾರುತಿ ಜೋಗಾನಿ, ರಾಜು ದೇಸಾಯಿ, ಲಕ್ಷ್ಮಣ ದಂಡಾಪುರ, ದಿಶಾ ಸಮಿತಿ ಸದಸ್ಯ ಸಿದ್ದಲಿಂಗ ಸರೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net