ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ 15ರಂದು

12 RON-1
Published on

ರೋಣ: ಸೆ.15ರಂದು ಭಾರತದ ‘ಸಂವಿಧಾನ ಪೀಠಿಕೆ ಓದು’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಪಂ ಇಒ ರವಿ ಎ.ಎನ್. ಅಧ್ಯಕ್ಷತೆಯಲ್ಲಿ ದಲಿತ ಮುಖಂಡರ ಸಭೆ ಜರುಗಿತು.

ಆ.15ರ ಸ್ವಾತಂತ್ರೃ ದಿನಾಚರಣೆ ಮಾದರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.
ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸಬೇಕು ಎಂದು ದಲಿತ ಮುಖಂಡ ಪ್ರಕಾಶ ಹೊಸಳ್ಳಿ ಮತ್ತು ಹನಮಂತ ಪೂಜಾರ ಸಲಹೆ ನೀಡಿದರು.

ವಿವಿಧ ದಿನಾಚರಣೆಗಳ ಸಮಿತಿಯ ಅಧ್ಯಕ್ಷರಾದ ತಹಸೀಲ್ದಾರ್ ಅವರೇ ಸಭೆಗೆ ಗೈರು ಹಾಜರಾಗಿದ್ದು, ಸಂವಿಧಾನಕ್ಕೆ ಅಗೌರವ ತೋರತ್ತಿದ್ದಾರೆ. ದಲಿತರ ಸಭೆಗಳ ಬಗ್ಗೆ ತಹಸೀಲ್ದಾರ್‌ಗೆ ಗೌರವ ಇಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಸಮಸ್ಯೆ ಕೇಳಲು ಹೋದರೆ ‘ಕಚೇರಿಗೆ ಯಾಕ ಬರರೀತಿ. ಇಲ್ಲಿ ಏನು ಕೆಲಸ’ ಎಂದು ಕೇಳುತ್ತಾರೆ. ನಾವು ಅವರ ಮನೆಗೆ ಹೋಗಿದ್ದೇವಾ? ಎಂದು ದಲಿತ ಮುಖಂಡ ಮೌನೇಶ ಹಾದಿಮನಿ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್, ಸಂವಿಧಾನದ ಬಗ್ಗೆ ತಹಸೀಲ್ದಾರ್ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ವೀರಪ್ಪ ತೆಗ್ಗಿನಮನಿ ಕಿಡಿಕಾರಿದರು. ಶರಣಪ್ಪ ದೊಡ್ಡಮನಿ, ಬಸವಂತಪ್ಪ ತಳವಾರ, ಬಸವರಾಜ ಕಾಳ್ಳೆ, ಬಸವರಾಜ ಜಗ್ಗಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net