ಭಾರತದ ಸಂವಿಧಾನ ಸಿಹಿ ನೀರಿನ ಸಮುದ್ರ

h27-jss
Published on
  • ಹುಬ್ಬಳ್ಳಿ: ನಗರದ ಜೆ.ಎಸ್.ಎಸ್. ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    ಹೈಕೊರ್ಟ್ ವಕೀಲ ವಿಶ್ವನಾಥ ಬಿಜಗತ್ತಿ ಮಾತನಾಡಿ, ನಮ್ಮ ಭಾರತ ಸಂವಿಧಾನ ಸಿಹಿ ನೀರಿನ ಸಮುದ್ರವಿದ್ದಂತೆ. ನಮ್ಮ ಸಂವಿಧಾನದ ರಚನಾಕಾರರು ಭಾರತ ಸ್ವಾತಂತ್ರ್ಯದ ಜತೆಗೆ ದೇಶದ ಸಮಗ್ರತೆಗೆ ಬೇಕಾದಂತಹ ಸಮಾನತೆ, ಸಹೋದರತೆ ಸ್ಥಾಪನೆಗೆ ಭದ್ರಬುನಾದಿ ಹಾಕಿದ್ದಾರೆ. ಸಂವಿಧಾನವು ಆವಿಷ್ಕಾರ ಮತ್ತು ಅನ್ವೇಷಣೆಯ ಪ್ರತೀಕ. ನಮ್ಮ ಪಿಠಿಕೆಯಲ್ಲಿ ಸೂಚಿಸಿರುವಂತೆ ನ್ಯಾಯ, ಜಾತ್ಯತೀತತೆ, ಸೌಹಾರ್ದತೆ, ಸಮಾನತೆ ತತ್ವಗಳು ನಮ್ಮ ಮೂಲಭೂತ ತತ್ವಗಳ ರಕ್ಷಣೆಗೆ ಕಾರಣೀಭೂತವಾಗಿವೆ ಎಂದರು.
    ಪ್ರಾಧ್ಯಾಪಕಿ ದೀಪಾ ಪಾಟೀಲ ಮಾತನಾಡಿ, ಸಂವಿಧಾನದ ಪ್ರತಿಯೊಂದು ಶಬ್ದಗಳ ಅರ್ಥದ ಬಗ್ಗೆ ಚರ್ಚೆ ನಂತರ ಕರಡು ರಚಿಸಲಾಯಿತು. ನಮ್ಮದು ವಿಶಾಲ ಮತ್ತು ವಿಸ್ತರಿತ ಸಂವಿಧಾನ ಮಾತ್ರವಲ್ಲ, ಇದು ಮಾದರಿ ಸಂವಿಧಾನವೂ ಹೌದು ಎಂದರು.
    ಪ್ರಾಚಾರ್ಯೆ ಡಾ. ರೂಪಾ ಇಂಗಳಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಪ್ರೊ. ಬಾಬುಲಾಲ್ ದರಗದ, ಪ್ರೊ. ಪೂರ್ಣಿಮಾ ಕುರಡಿಕೇರಿ, ಸುರೇಶ ಲಿಂಬಿಕಾಯಿ, ಶೈಲಜಾ ಹಗೇದಾಳ, ಸತೀಶ ಸಿ.ವಿ., ಸುರೇಶ ಲಮಾಣಿ ಇತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net