ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ

HOLE N PURA 1
ಹೊಳೆನರಸೀಪುರ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸಂವಿಧಾನ ದಿನ ಆಚರಿಸಲಾಯಿತು.
Published on

ಹೊಳೆನರಸೀಪುರ: ಎಲ್ಲ ದೇಶಗಳ ಸಂವಿಧಾನವನ್ನು ಸುದೀರ್ಘವಾಗಿ ಅಧ್ಯಯನ ಮಾಡಿದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಕ್ಕೆ ಮಾದರಿ ಸಂವಿಧಾನವನ್ನು ನೀಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಸಂವಿಧಾನ ಉಳಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಸೇರಿದಂತೆ ಎಲ್ಲ ನಾಯಕರು ಕೆಲಸ ಮಾಡುತ್ತಿದ್ದು, ಸಂವಿಧಾನವನ್ನು ತಿರುಚಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ಕುತಂತ್ರ ಫಲಿಸುವುದಿಲ್ಲ ಎಂದರು.

ಪಕ್ಷದ ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ಫೈರೋಜ್ ಷರೀಫ್, ಸಾಮಾಜಿಕ ಜಾಲತಾಣದ ಎಚ್.ಆರ್.ಪ್ರಸನ್ನ ಕುಮಾರ್, ಮಹಿಳಾ ಘಟಕದ ಸದಸ್ಯೆ ಎಚ್.ಟಿ.ಪಾರ್ವತಿ, ಹಿರಿಯ ಮುಖಂಡರಾದ ಗೋವಿಂದಣ್ಣ, ಎಚ್.ಎಸ್.ವೆಂಕಟೇಶ ,ಮುಬಾರಕ್, ಸಾಹೇಬ್ ಶರೀಫ್, ಸೈಯದ್ ವಸೀಂ, ಮಹಮದ್ ಉನೇಜ್ ಷರೀಫ್, ಅಲ್ತಾಮಸ್, ಸಲ್ಮಾನ್ ಖಾನ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net