

ಗದಗ: ಭಾರತ ದೇಶದ ಸಂವಿದಾನಕ್ಕೆ ಅಗಾಧ ಶಕ್ತಿಯಿದ್ದು, ಪ್ರತಿಯೊಬ್ಬರು ಅರಿತುಕೊಳ್ಳಿ ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಡಾ. ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಸಾಯಂಕಾಲ ಏರ್ಪಡಿಸಿದ್ದ ಸಂವಿದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸಂವಿದಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿಕೇಂದ್ರೀಕರಣ ಉದ್ದೇಶದಿಂದ ಸಂವಿದಾನಕ್ಕೆ 73, 74ನೇ ತಿದ್ದುಪಡಿ ತರುವ ಮೂಲಕ ಜನಸಾಮಾನ್ಯರ ಕೈಗೆ ಅಧಿಕಾರ ಸಿಗುವಂತಾಗಿದೆ.
ಜನರ ಭಾವನೆ, ಅಭಿಪ್ರಾಯಗಳಿಗೆ ಮನ್ನಣೆ ಸಿಗಬೇಕು. ಜನರು ವಿಕೇಂದ್ರೀಕರಣ ಅನುಭವಿಸುವದರ ಜೊತೆಗೆ ಅಭಿವೃದ್ಧಿಯಾಗ ಬೇಕೆನ್ನುವದು ಸಂವಿದಾನ ಜಾಗೃತಿ ಜಾಥಾ ಉದ್ದೇಶ ಹಾಗೂ ಪ್ರೇರಣೆಯಾಗಿದೆ ಎಂದರು.
ಇಂದಿನ ವಿಧ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ನೀಡಬೇಕು. ಸಂವಿಧಾನ ಒಂದು ದೊಡ್ಡ ಅಸ್ತ್ರವಾಗಿದೆ ಇದರ ಸರಿಯಾದ ದಾರಿಯಲ್ಲಿ ಉಪಯೋಗಿಸುವ ಕುರಿತು ತಿಳುವಳಿಕೆ ನೀಡಬೇಕಾಗಿದೆ. ಸಂವಿಧಾನ ರಚನೆಯಾಗಿ 75 ವರ್ಷಗಳು ಕಳೆದರು ಸಹ ದೇಶದಲ್ಲಿ ಜಾತೀಯತೆ ಇನ್ನೂ ತೊಡೆದು ಹಾಕಲು ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ಆಡಳಿತ ವಿಫಲವಾಗಿದೆ. ಸಂವಿಧಾನ ಡಾ.ಬಿ.ಆರ್. ಅಂಬೇಡ್ಕರ ಅಥವಾ ಪರಿಶಿಷ್ಟರ ಆಸ್ತಿ ಅಲ್ಲ ಅದು ಎಲ್ಲರ ಆಸ್ತಿ ಎಂಬುದನ್ನು ಎಲ್ಲರು ಅರಿತು ಸಾಗಬೇಕು. ದೇಶದಲ್ಲಿ ಶಾಂತಿ ನೆಲೆಸಲು ಸಂವಿಧಾನದಿಂದ ಸಾಧ್ಯವಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ಸಂವಿಧಾನದ ಪೀಠಿಕೆ ಒದಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ವಿಶ್ವಗುರು ಮಹಾ ಮಾನವತಾವಾದಿ ಬಸವಣ್ಣನವರನ್ನು ಸಾಂಸ್ಕೃತಿಕ ರಾಯಬಾರಿಯನ್ನಾಗಿ ಮಾಡಲಾಗಿದೆ. ಸಂವಿಧಾನ ಹೇಳುವದನ್ನು ಬಸವಣ್ಣನವರ ವಚನಗಳು ಹೇಳುತ್ತವೆ. ಸಂವಿಧಾನದ ಜಾಥಾದ ಮೂಲಕ ಜನರನ್ನು ಜಾಗೃತರನ್ನಾಗಿಸಬೇಕು, ನೆರೆಹೊರೆಯ ತಂಡಗಳನ್ನು ರಚಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಗದಗ ಜಿಲ್ಲೆ ಎಲ್ಲ ರಂಗಗಳಲ್ಲಿಯೂ ಪ್ರಥಮ ಸ್ಥಾನದಲ್ಲಿದ್ದು ಅದರಂತೆ ನೆರೆಹೊರೆಯ ತಂಡಗಳ ರಚನೆಯಲ್ಲಿಯೂ ಗದಗ ಪ್ರಥಮವಾಗಬೇಕು. ಪಂಚ ಗ್ಯಾರಂಟಿಗಳನ್ನು ಸಂವಿಧಾನದ ಅಡಿಯಲ್ಲಿ ನೀಡಿದಂತಹ ಕಾರ್ಯಕ್ರಮಗಳಾಗಿವೆ ಇದರಿಂದ ಒಂದು ಕೋಟಿ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆತ್ತುವ ಕ್ರಾಂತಿಕಾರಕ ಕಾರ್ಯಕ್ರಮವಾಗಿದೆ.
ಜನ ಬೇಡುವವರಾಗಬಾರದು ತೆಗೆದುಕೊಳ್ಳವರಾಗಬೇಕು, ಜನಪ್ರತಿನಿಧಿಗಳು ಜನನರಿಗಾಗಿ ಪ್ರತಿನಿಧಿಗಳಾಗಬೇಕು. ಅವರ ಕಾರ್ಯಗಳನ್ನು ಆದ್ಯತೆ ಮೇಲೆ ಮಾಡಬೇಕು. ಇಂತ ವ್ಯವಸ್ಥೆ ವಿಕೇಂದ್ರೀಕರಣದಿಂದ ಸಾಧ್ಯವಿದೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಎಂದರು.
ಕಾರ್ಯಕ್ರಮದ ಸಂಪನ್ಮೂ ವ್ಯಕ್ತಿಯಾಗಿ ಆಗಮಿಸಿದ್ದ ಜೆ.ಕೆ. ಜಮಾದಾರ ಮಾತನಾಡಿ ನಮ್ಮ ಸಂವಿಧಾನದ ಬೆಳವಣಿಗೆಯಲ್ಲಿ ಹಲವಾರು ಹಂತಗಳನ್ನು ಹೊಂದಿದೆ. ನಮ್ಮ ಸಂವಿಧಾನದಲ್ಲಿ ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಈ ಬೇರೆ ದೇಶಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿ ಅದರಲ್ಲಿನ ಉತ್ತಮ ಅಂಶಗಳನ್ನು ಹಗಲು ರಾತ್ರಿ ಅಧ್ಯಯನ ನಡೆಸಿ ಭಾರತಕ್ಕೆ ಅತ್ಯುತ್ತಮವಾದ ಸಂವಿಧಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ದೇವತಾ ಮನುಷ್ಯರಾಗಿದ್ದಾರೆ ಎಂದು ವಿವರಿಸಿದರು.
ಉಪನ್ಯಾಸಕರಾದ ಎಸ್.ಬಿ. ಜೊಗಣ್ಣವರ ಡಾ.ಬಿ.ಆರ್ ಅಂಬೇಡ್ಕರ ಅವರು ಹೆಣ್ಣು ಮಕ್ಕಳಿಗೆ ನೀಡಿದ ಕೊಡುಗೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್.
ಹೆಚ್ಚುವರಿ ಪೋಲಿಸ ಅಧೀಕ್ಷಕ ಎನ್.ಬಿ. ಸಂಕದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ, ಗಣ್ಯರುಗಳಾದ ಎಲ್.ಡಿ.ಚಂದಾವರಿ, ಕೃಷ್ಣಾ ಪರಾಪೂರ, ಪರವೀನ ಬಾನು ಬಿ.ಬಿ.ಅಸೂಟಿ, ಎಸ್.ಎನ್. ಬಳ್ಳಾರಿ, ಬಸವರಾಜ ಕಡೇಮನಿ ಉಪಸ್ಥಿತರಿದ್ದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕ ಮಾರುತಿ ಬ್ಯಾಕೋಡ ಸ್ವಾಗತಿಸಿದರು. ಕಣಗಿನಹಾಳ ಮೊರಾರ್ಜಿ ವಸತಿ ಶಾಲೆಯ ವಿಧ್ಯಾರ್ಥಿನಿಯರು ನಾಡಗೀತೆ ಪ್ರಸ್ತುತಿಸಿದರು. ದಲಿತ ಕಲಾ ಮಂಡಳಿ ತಂಡದವರು ಕ್ರಾಂತಿ ಗೀತೆಗಳನ್ನು ಪ್ರಸ್ತುತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು