

ಮೈಸೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ, ನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಯಿಂದ 75 ನೇ ಸಂವಿಧಾನ ದಿನದ ಪ್ರಯುಕ್ತ ಜಿಲ್ಲಾದ್ಯಂತ ಜ.26 ರಿಂದ ಫೆ.23ರವರೆಗೆ ‘ಸಂವಿಧಾನ ಜಾೃಗತಿ ಜಾಥಾ’ ಸ್ತಬ್ಧಚಿತ್ರ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
‘ಸಂವಿಧಾನ ಜಾೃಗತಿ ಜಾಥಾ’ ಸ್ತಬ್ಧಚಿತ್ರಕ್ಕೆ ಜ.26 ರಂದು ಬೆಳಗ್ಗೆ 11.30ಕ್ಕೆ ಪಂಜಿನ ಕವಾಯಿತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದು, ಜಿಲ್ಲೆಯ ಸಂಸದರು, ವಿಧಾನ ಸಭಾ ಹಾಗೂ ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ಒಂದು ತಿಂಗಳಗಳ ಕಾಲ ‘ಸಂವಿಧಾನ ಜಾೃಗತಿ ಜಾಥಾ’ ಎರಡು ಸ್ತಬ್ಧಚಿತ್ರಗಳು ಮೈಸೂರು ಹಾಗೂ ಹುಣಸೂರು ವಿಭಾಗದ ವ್ಯಾಪ್ತಿಯಲ್ಲಿ ಸಂಚರಿಸಲಿವೆ.