ಸಂವಿಧಾನ ಸಮಾನತೆಯ ಬುನಾದಿ

Constitution is the foundation of equality
ಬ್ರಹ್ಮದೇವನಮಡು ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥಯಾತ್ರೆಗೆ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ಎಚ್.ವೈ. ಸಿಂಗೆಗೋಳ, ಸಂಗನಗೌಡ ಬಿರಾದಾರ, ಎಸ್.ಸಿ. ನಾಯ್ಕೋಡಿ ಇತರರಿದ್ದರು.
Published on

ಬ್ರಹ್ಮದೇವನಮಡು: ಸಮ ಸಮಾಜದ ಬುನಾದಿಯಾಗಿರುವ ಸಂವಿಧಾನದ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದು ಸಿಂದಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ವೈ. ಸಿಂಗೆಗೋಳ ಹೇಳಿದರು.

ಸಿಂದಗಿ ತಾಲೂಕು ಬ್ರಹ್ಮದೇವನಮಡು ಹಾಗೂ ಹೊನ್ನಳ್ಳಿ ಗ್ರಾಮಕ್ಕೆ ಸೋಮವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಕುಂಭಮೇಳದೊಂದಿಗೆ ಸ್ವಾಗತಿಸಿ, ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು.

ದೇಶದ ಸರ್ವಧರ್ಮ, ಜಾತಿ ಜನರ ಹಿತ ಕಾಪಾಡುವ ಅಂಬೇಡ್ಕರ್ ಅವರ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ. ಕಾನೂನುಗಳ ಪಾಲನೆ ಬದ್ಧತೆ ಬೆಳೆಸಿಕೊಳ್ಳಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷ ಸಂಗನಗೌಡ ಪಾಟೀಲ, ದಲಿತ ಮುಖಂಡ ವೈ.ಸಿ. ಮಯೂರ, ಶ್ರೀಶೈಲ ಜಾಲವಾದಿ, ವಿಜುಗೌಡ ಬಿರಾದಾರ, ಕಲಕೇರಿ ಠಾಣಾಧಿಕಾರಿ ರೋಹಿಣಿ ಪಾಟೀಲ, ಸಂತೋಷ ಮಣಗಿರಿ, ಮಲ್ಲು ಗುಡಿಮನಿ, ಚಂದ್ರಶೇಖರ ಕೆಂಭಾವಿ, ರುಕ್ಮದ್ದಿನ್ ಹಳಿಮನಿ, ರವಿ ಯಡ್ರಾಮಿ, ರವಿ ಹೊಳಿ, ಯಮನೂರ ಬೇಕಿನಾಳ, ಬಸನಗೌಡ ಉಳ್ಳೆಸೂರ, ಸಾಹೇಪಟೇಲ ಮುರಡಿ, ತಿಪ್ಪಯ್ಯ ನೆಲ್ಲಗಿಮಠ, ಪಿಡಿಒ ಎಸ್.ಸಿ. ನಾಯ್ಕೋಡಿ, ಕಾರ್ಯದರ್ಶಿ ಸಿ.ಡಿ. ಕೋರಬು, ಗ್ರಾಮ ಲೆಕ್ಕಾಧಿಕಾರಿ ಹಸನ್ ಕೋರಬು, ಹಣಮಂತ ಯಂಟಮಾನ, ರಾಜು ಖಾನಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net